Bengaluru 29°C
Ad

ಅವರು ನೀಡಿದರೆ ಜವಾಬ್ದಾರಿ ನಿರ್ವಹಿಸುತ್ತೇನೆ ಅಷ್ಟೇ: ಹೆಚ್‌ಡಿ ಕುಮಾರಸ್ವಾಮಿ

 ಎನ್‌ಡಿಎ ಸಭೆಯಲ್ಲಿ  ಭಾಗವಹಿಸಲು ದೆಹಲಿಗೆ  ಆಗಮಿಸಿದ ಮಂಡ್ಯ  ಸಂಸದ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದ್ದು,

ನವದೆಹಲಿ: ಎನ್‌ಡಿಎ ಸಭೆಯಲ್ಲಿ  ಭಾಗವಹಿಸಲು ದೆಹಲಿಗೆ  ಆಗಮಿಸಿದ ಮಂಡ್ಯ  ಸಂಸದ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ನನಗೆ ಮಂತ್ರಿ ಸ್ಥಾನ ಬೇಕೆಂದು ನಾನು ಒತ್ತಡ ಹಾಕುವುದಿಲ್ಲ ಎಂದು  ಹೇಳಿದರು.

ನರೇಂದ್ರ ಮೋದಿ  ನಾಯಕತ್ವದಲ್ಲಿ ಮತ್ತೆ ಸರ್ಕಾರ ಮುಂದುವರಿಯಲಿದೆ.  ಆದರೂ ಸ್ಥಳೀಯ ಪಕ್ಷಗಳಿಗೆ ಸಹ ಖಾತೆ ನೀಡುತ್ತಾರೆ. ನಮ್ಮಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎನ್ನುವುದು ಹೈಕಮಾಂಡ್‌ಗೆ  ಗೊತ್ತಿದೆ ಎಂದು ತಿಳಿಸಿದರು.

ನಾಡಿನ ಜನತೆಗೆ, ದೇಶಕ್ಕೆ ಒಳ್ಳೆದಾಗುವ ಖಾತೆ ಸಿಕ್ಕಿದರೆ ಉತ್ತಮವಾಗಿ ಕೆಲಸ ಮಾಡಬಹುದು. ಡಾ. ಮಂಜುನಾಥ್‌ಗೆ  ಖಾತೆ ನೀಡುವ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ.  ಅವರು ನೀಡಿದರೆ ಜವಾಬ್ದಾರಿ ನಿರ್ವಹಿಸುತ್ತೇನೆ ಅಷ್ಟೇ. ತೀರ್ಮಾನ ಏನಿದ್ದರೂ ಸಹ ಅವರದ್ದು ಎಂದು ಪ್ರತಿಕ್ರಿಯಿಸಿದರು.

Ad
Ad
Nk Channel Final 21 09 2023
Ad