Bengaluru 23°C
Ad

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ: ಸೋಮನಾಥ್​ ಭಾರ್ತಿ

ಎಲ್ಲರ ಚಿತ್ತ 4ರ ಫಲಿತಾಂಶದತ್ತ ನೆಟ್ಟಿದ್ದು,ನಿನ್ನೆಯಷ್ಟೇ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಸಮೀಕ್ಷೆಯಲ್ಲಿ ಎನ್​ಡಿಎ ಬಹುಮತ ಪಡೆಯಲಿದೆ ಎಂಬುದನ್ನು ತೋರಿಸಿದೆ ಇದರಬೇನಲ್ಲೇ   ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು  ಹೇಳಿಕೆಯೊಂದನ್ನು ನೀಡಿದ್ದಾರೆ.

ನವದೆಹಲಿ: ಎಲ್ಲರ ಚಿತ್ತ 4ರ ಫಲಿತಾಂಶದತ್ತ ನೆಟ್ಟಿದ್ದು,ನಿನ್ನೆಯಷ್ಟೇ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಸಮೀಕ್ಷೆಯಲ್ಲಿ ಎನ್​ಡಿಎ ಬಹುಮತ ಪಡೆಯಲಿದೆ ಎಂಬುದನ್ನು ತೋರಿಸಿದೆ ಇದರಬೇನಲ್ಲೇ   ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು  ಹೇಳಿಕೆಯೊಂದನ್ನು ನೀಡಿದ್ದಾರೆ.

ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಸೋಮನಾಥ್​ ಭಾರ್ತಿ ಚುನಾವಣೋತ್ತರ ಸಮೀಕ್ಷೆ ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು  ಹೇಳಿದ್ದಾರೆ.

ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಜೂನ್​ 4 ರಂದು ಫಲಿತಾಂಶ ತಲೆಕೆಳಕಾಗುತ್ತದೆ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದರು.

ದೆಹಲಿಯ ಎಲ್ಲಾ ಏಳು ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ. ಮೋದಿಯ ಭಯದಿಂದಾಗಿ ಎಕ್ಸಿಟ್ ಪೋಲ್‌ಗಳು ಸೋಲುವುದನ್ನು ತೋರಿಸಲು ಸಾಧ್ಯವಿಲ್ಲ ಎಂದರು. ಜೂನ್ 4 ರಂದು ನಿಜವಾದ ಫಲಿತಾಂಶ ಬರುವವರೆಗೆ ನಾವೆಲ್ಲರೂ ಕಾಯಬೇಕು. ಜನರು ಬಿಜೆಪಿ ವಿರುದ್ಧ ಭಾರಿ ಮತ ಹಾಕಿದ್ದಾರೆ ಎಂದು ಹೇಳಿದರು.

Ad
Ad
Nk Channel Final 21 09 2023
Ad