Ad

ಅಪಾರ್ಟ್​ಮೆಂಟ್ ಎದುರು ರಸ್ತೆಯಲ್ಲಿ ಪತಿಯ ಶವ ಪತ್ತೆ : ಇತ್ತ ರೂಮ್‌ ನಲ್ಲಿ ಪತ್ನಿ ಶವ!

ತನ್ನ ಅಪಾರ್ಟ್​ಮೆಂಟ್​ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ತೆಗೆದುಕೊಂಡು ಪತ್ನಿಗೆ ಎಷ್ಟೇ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸಿರಲಿಲ್ಲ. ಅವರ ಕುತ್ತಿಗೆಯಲ್ಲಿದ್ದ ಕೀ ಬಳಸಿ ಮನೆಗೆ ಹೋಗಿ ನೋಡಿದಾಗ ಹಾಲ್​ನಲ್ಲಿ ಪತ್ನಿಯೂ ಕೂಡ ಶವವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

 ಮುಂಬೈ:  ತನ್ನ ಅಪಾರ್ಟ್​ಮೆಂಟ್​ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ತೆಗೆದುಕೊಂಡು ಪತ್ನಿಗೆ ಎಷ್ಟೇ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸಿರಲಿಲ್ಲ. ಅವರ ಕುತ್ತಿಗೆಯಲ್ಲಿದ್ದ ಕೀ ಬಳಸಿ ಮನೆಗೆ ಹೋಗಿ ನೋಡಿದಾಗ ಹಾಲ್​ನಲ್ಲಿ ಪತ್ನಿಯೂ ಕೂಡ ಶವವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್ ಮುಂಭಾಗದ ರಸ್ತೆಯಲ್ಲಿ 58 ವರ್ಷದ ಕಿಶೋರ್ ಪೆಡ್ನೇಕರ್ ಮೃತದೇಹ ಪತ್ತೆಯಾಗಿತ್ತು.

ಜಿಮ್ ಉಪಕರಣಗಳ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆತನ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿಶೋರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್, ಅವರು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅಸುನೀಗಿದ್ದಾರೆ.

ಪೊಲೀಸರು ಫ್ಲಾಟ್ ತೆರೆದಾಗ ಅವರ ಪತ್ನಿಯ ಮೃತದೇಹವು ಕಂಡುಬಂದಿದೆ. ಕಿಶೋರ್ ತಾನು ಸಾಯುವ ಮೊದಲು ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಖಿನ್ನತೆ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ಹಲವು ಔಷಧಿಗಳು ಅವರ ಫ್ಲಾಟ್​ನಲ್ಲಿ ಪತ್ತೆಯಾಗಿದ್ದವು. ಖಿನ್ನತೆಗೆ ಒಳಗಾಗಿದ್ದ ಕಿಶೋರ್ ಸಾಯಲು ನಿರ್ಧರಿಸಿದ್ದರು. ಇನ್ನು ಘಟನೆ ಬಗ್ಗೆ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಲಾಗುತ್ತಿದೆ,

Ad
Ad
Nk Channel Final 21 09 2023