Bengaluru 23°C
Ad

ವಿಚ್ಛೇದನ​ ನೀಡಲು ಮುಂದಾದ ಪತಿ: ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಚೆನ್ನೈನ ವೆಲಚೇರಿಯಲ್ಲಿ ಪತಿ ವಿಚ್ಛೇದನ ನೀಡಲು ಮುಂದಾಗಿರುವುದಕ್ಕೆ ಬೇಸರಗೊಂಡ ಹೆಂಡತಿ ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. 

ಚೆನ್ನೈ: ಚೆನ್ನೈನ ವೆಲಚೇರಿಯಲ್ಲಿ ಪತಿ ವಿಚ್ಛೇದನ ನೀಡಲು ಮುಂದಾಗಿರುವುದಕ್ಕೆ ಬೇಸರಗೊಂಡ ಹೆಂಡತಿ ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದೆ.

ಶೋಭಾ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಬೇಸರಗೊಂಡಿದ್ದ ಆಕೆ ಸ್ಕೂಟರ್​ನಲ್ಲಿ ವೆಲಚೇರಿ ಫ್ಲೈಓವರ್ ಬಳಿ ಬಂದಿದ್ದಾಳೆ. ಫ್ಲೈಓವರ್​ನ ತಡೆಗೋಡೆ ಏರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದಂಪತಿಗಳು ತಾಂಬರಂ ಸಮೀಪದ ಸೆಂಬಕ್ಕಂನಲ್ಲಿ ವಾಸಿಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಶೋಭಾಗೆ ಕಾರ್ತಿಕ್​ (33) ಎಂಬವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ 3 ವರ್ಷದ ಮಗನಿದ್ದಾನೆ.

ದಂಪತಿ ನಡುವೆ ಭಿನ್ನಾಬಿಪ್ರಾಯವಿದ್ದ ಕಾರಣ ಕಾರ್ತಿಕ್​ ಡಿವೋರ್ಸ್​ ನೀಡಲು ಮುಂದಾಗಿದ್ದನು. ಶೋಭಾ ಆತನ ಜೊತೆಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದಾಗ ಅವನು ನಿರಾಕರಿಸಿದನು.  ಇದರಿಂದ ಮನನೊಂದ ಶೋಭಾ ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821

Ad
Ad
Nk Channel Final 21 09 2023
Ad