ಕೇರಳ: ಕರ್ನಾಟಕದ ಗಡಿನಾಡಿನಲ್ಲಿ ಹಾಗೆಯೇ ವಿದೇಶದಲ್ಲಿ ನೆಲೆಸಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಶಿಕ್ಷಣಕ್ಕಾಗಿ ನೀಡಿದ ನಿರಂತರ ಸೇವೆಗಾಗಿ ವಂದನೀಯ ಫಾದರ್ ಬಾಜಿಲ್ ವಾಸ್, ಸ್ಟೀವನ್ ಕ್ವಾಡ್ರಸ್ ಪೆವ ಹಾಗೂ ಜೋಸೆಫ್ ಮಥಾಯಸ್ ಇವರಿಗೆ ತಿರುವನಂತಪುರಂ ಇ ಭಾರತ್ ಭವನದಲ್ಲಿ ನವಂಬರ್ 27ರಂದು ಸನ್ಮಾನಿಸಲಾಯಿತು.
Ad
ಈ ಸನ್ಮಾನವು ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಇವರ ಸಹಯೋಗದಲ್ಲಿ ನಡೆಸಲಾಯಿತು.
Ad
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇರಳ ಸರ್ಕಾರದ ಮಂತ್ರಿಗಳಾದ ಕಡವಪಳ್ಳಿ ರಾಮಚಂದ್ರನ್ ಮತ್ತು ಜಿ.ಆರ್. ಅನಿಲ್ ಉಪಸ್ಥಿತರಿದ್ದರು. ಕಾಸರಗೋಡಿನ ಶಾಸಕ ನೆಲ್ಲಿಕುನ್ನು ಮತ್ತು ಮಂಜೇಶ್ವರದ ಶಾಸಕ ಆಶ್ರಫ್ ಸಭೆಯಲ್ಲಿ ಹಾಜರಿದ್ದರು.
Ad
Ad