Bengaluru 23°C
Ad

ಕುಖ್ಯಾತ ಕ್ರಿಮಿನಲ್ ನನ್ನು ಹೊಡೆದುರುಳಿಸಿದ ತಮಿಳುನಾಡು ಪೊಲೀಸರು

Tamil

ಚೆನ್ನೈ: 50ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿರುವ ಹಿಸ್ಟರಿ ಶೀಟರ್ ಒಬ್ಬನನ್ನು ಬುಧವಾರ(ಸೆ18) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ. 40ರ ಹರೆಯದ ಆರೋಪಿ ಕಾಕ್ಕಾತೊಪ್ಪು ಎಂದು ಕುಖ್ಯಾತನಾಗಿದ್ದ ಬಾಲಾಜಿ ತಲೆಮರೆಸಿಕೊಂಡಿದ್ದ.

ತಪ್ಪಿಸಿಕೊಳ್ಳುತ್ತಲೇ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಆತನ ಅಡಗುತಾಣದ ಸುಳಿವು ಆಧರಿಸಿ, ಪೊಲೀಸ್ ತಂಡ ಉತ್ತರ ಚೆನ್ನೈನ ವ್ಯಾಸರ್ಪಾಡಿಯಲ್ಲಿನ ಪ್ರದೇಶವನ್ನು ಬೆಳಗಿನ ಜಾವ 4.30 ರ ವೇಳೆಗೆ ಪರಿಶೀಲಿಸಿದಾಗ ಆತ ಪತ್ತೆಯಾಗಿದ್ದಾನೆ. ಆತ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ತತ್ ಕ್ಷಣ ಆತ್ಮರಕ್ಷಣೆಗಾಗಿ ಪೊಲೀಸರೂ ಗುಂಡು ಹಾರಿಸಿದ್ದು ಆತ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad
Ad
Nk Channel Final 21 09 2023