Bengaluru 23°C

ವಿನೇಶ್ ಫೋಗಟ್ ಅನರ್ಹತೆ ಕುರಿತ ಹೇಮಾ ಮಾಲಿನಿ ಹೇಳಿಕೆಗೆ ಆಕ್ರೋಶ ವ್ಯಕ್ತ

Hema

ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಒಲಂಪಿಕ್ಸ್‌ನಲ್ಲಿ ಅನರ್ಹಗೊಂಡಿರೋದಕ್ಕೆ ಇಡೀ ದೇಶವೇ ಆಘಾತದಲ್ಲಿದೆ. ಕೇವಲ 100 ಗ್ರಾಂ ತೂಕ ಹೆಚ್ಚಳಗೊಂಡಿದ್ದರಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹೇಮಾ ಮಾಲಿನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಕನಿಷ್ಠ ನಿಮ್ಮ ಸಂತೋಷವನ್ನು ಮರೆಮಾಡುವ ಪ್ರಯತ್ನವನ್ನಾದರೂ ಮಾಡಿ ಎಂದು ಸಲಹೆ ನೀಡಿದ್ದಾರೆ.


ವಿನೇಶ್ ಫೋಗಟ್ ಅನರ್ಹತೆ ಬಗ್ಗೆ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಹೇಮಾ ಮಾಲಿನಿ, ಕೇವಲ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ಅನರ್ಹಗೊಂಡಿರುವ ವಿಷಯ ಕೇಳಿ ಶಾಕ್ ಆಯ್ತು. ಕಲಾವಿದರು ಸೇರಿದಂತೆ ಮಹಿಳೆಯರಿಗೆ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳೋದು ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತದೆ. 100 ಗ್ರಾಂನಿಂದ ಅನರ್ಹಗೊಂಡಿದ್ದಕ್ಕೆ ನೋವಿದೆ. ವಿನೇಶ್ ಫೋಗಟ್ ಶೀಘ್ರದಲ್ಲಿಯೇ 100 ಗ್ರಾಂ ತೂಕ ಕಳೆದುಕೊಳ್ಳುತ್ತಾನೆ ಎಂದು ಭಾವಿಸುತ್ತಾನೆ. ಆದ್ರೆ ಪದಕ ನಮ್ಮದಾಗಲ್ಲ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದರು.


ಹೇಮಾ ಮಾಲಿನಿಯವರ ಈ ಹೇಳಿಕೆಗೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೇಮಾ ಮಾಲಿನಿ ಹೇಳಿಕೆಯ ವಿಡಿಯೋಗೆ ರೀಟ್ವೀಟ್ ಮಾಡಿರುವ ಸಿದ್ಧಾರ್ಥ್ ಎಂಬವರು, ಟೀಕಿಸುವ ಕೆಲಸ ಆರಂಭವಾಗಿದೆ. ಸ್ವಲ್ಪವೂ ನಾಚಿಕೆ ಇಲ್ಲದೇ ವಿನೇಶ್ ಫೋಗಟ್ ಅವರನ್ನು ಹೇಮಾ ಮಾಲಿನಿ ಟೀಕಿಸಿದ್ದಾರೆ. ವಿನೇಶ್ ಫೋಗಟ್‌ಗೆ ಬೆಂಬಲವಾಗಿ ನಿಲ್ಲಬೇಕಾದ ಸಂದರ್ಭದಲ್ಲಿ ಟೀಕೆ ಮಾಡುವ ಕೆಲಸ ಶುರುವಾಗಿರೋದು ಬೇಸರದ ಸಂಗತಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.


https://x.com/i/status/1821136077257617713


 

Nk Channel Final 21 09 2023