ಮಹಾರಾಷ್ಟ್ರ: ಮುಂಬೈ, ಪುಣೆ, ಪಾಲ್ಗಢ ಸೇರಿದಂತೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಭಾರತೀಯ ಹವಾಮಾನ ಇಲಾಖೆಯು ಆಗಸ್ಟ್ 4 ರಂದು ಪಾಲ್ಗಢ, ಪುಣೆ ಮತ್ತು ಸತಾರಾಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಥಾಣೆ, ಮುಂಬೈ, ರಾಯಗಢ, ಸಿಂಧುದುರ್ಗ ಮತ್ತು ನಾಸಿಕ್‌ಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಶನಿವಾರದಂದು ದೇಶದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಮಧ್ಯಪ್ರದೇಶದಲ್ಲಿ ನಿರಂತರ ಮಳೆಯ ನಂತರ ಮನೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದಾಗಿ 114 ರಸ್ತೆಗಳನ್ನು ಮುಚ್ಚಲಾಗಿದೆ, ಆದರೆ ಆಗಸ್ಟ್ 7 ರವರೆಗೆ ಭಾರೀ ಮಳೆ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜ್ಯದ ರಸ್ತೆ ಸಾರಿಗೆ ನಿಗಮವು 82 ಮಾರ್ಗಗಳಲ್ಲಿ ತನ್ನ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಶುಕ್ರವಾರ ಸಂಜೆಯಿಂದ ಜೋಗಿಂದರ್‌ನಗರದಲ್ಲಿ ಅತಿ ಹೆಚ್ಚು 85 ಮಿಮೀ, ಗೋಹರ್ 80 ಮಿಮೀ, ಶಿಲಾರು 76.4 ಮಿಮೀ, ಪೌಂಟಾ ಸಾಹಿಬ್ 67.2 ಮಿಮೀ, ಪಾಲಂಪುರ 57.2 ಮಿಮೀ, ಧರ್ಮಶಾಲಾ 56.2 ಮಿಮೀ ಮತ್ತು ಚೌಪಾಲ್ 52 ಮಿಮೀ ಮಳೆಯಾಗಿದೆ.