Bengaluru 21°C
Ad

2 ಸಾವಿರಗಿಂತ ಕಡಿಮೆ ಡಿಜಿಟಲ್​​ ಪಾವತಿಗೆ ಜಿಎಸ್​​ಟಿ!

2 ಸಾವಿರ ರೂಪಾಯಿಗಿಂತ ಕಡಿಮೆ ಡಿಜಿಟಲ್​ ಪಾವತಿಗೆ ಕೇಂದ್ರ ಸರ್ಕಾರ ಶೇ.18ರಷ್ಟು ಜಿಎಸ್​​ಟಿ ವಿಧಿಸಲಿದೆ ಎಂದು ವರದಿಯಾಗಿದೆ.

ನವದೆಹಲಿ : 2 ಸಾವಿರ ರೂಪಾಯಿಗಿಂತ ಕಡಿಮೆ ಡಿಜಿಟಲ್​ ಪಾವತಿಗೆ ಕೇಂದ್ರ ಸರ್ಕಾರ ಶೇ.18ರಷ್ಟು ಜಿಎಸ್​​ಟಿ ವಿಧಿಸಲಿದೆ ಎಂದು ವರದಿಯಾಗಿದೆ.

ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವುದ್ದಕ್ಕಾಗಿ 2 ಸಾವಿರ ರೂಪಾಯಿಗಿಂತ ಕಡಿಮೆ ವಹಿವಾಟಿಗೆ ಜಿಎಸ್​​ಟಿ ವಿಧಿಸಲ್ಲ ಎಂದಿದ್ದ ಕೇಂದ್ರ ಸರ್ಕಾರ ಇದೀಗ ಈ ಮೊತ್ತದ ಡಿಜಿಟಲ್​ ಪಾವತಿಗೂ ಜಿಎಸ್​​ಟಿ ಹಾಕಲು ಮುಂದಾಗಿದ್ದು, ಗ್ರಾಹಕರಲ್ಲಿ ಆತಂಕ ಮೂಡಿದೆ.

ಸೆ.9ರಂದು ದೆಹಲಿಯಲ್ಲಿ GST ಕೌನ್ಸಿಲ್ ಸಭೆ ನಡೆಯಲಿದ್ದು, ಈ ಮೇಲಿನಂತೆ GST ವಿಧಿಸುವ ಪ್ರಸ್ತಾವನೆ ಕೇಂದ್ರ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈವರೆಗೂ ಡೆಬಿಟ್ & ಕ್ರೆಡಿಟ್ ಕಾರ್ಡ್‌ಗಳ ಮೂಲಕ 2 ಸಾವಿರ ರೂಪಾಯಿಗಿಂತ ಹೆಚ್ಚು ವಹಿವಾಟುಗಳಿಗೆ ಮಾತ್ರ GST ವಿಧಿಸಲಾಗುತ್ತಿತ್ತು. ಆದರೆ ಇನ್ಮುಂದೆ 2 ಸಾವಿರ ರೂಪಾಯಿಗಿಂತ ಕಡಿಮೆ ಡಿಜಿಟಲ್ ಪಾವತಿಗೂ ಜಿಎಸ್​​​ಟಿ ಏಟು ಬೀಳುವ ಸಾಧ್ಯತೆ ಇದೆ.

Ad
Ad
Nk Channel Final 21 09 2023