Bengaluru 21°C
Ad

ಮುಂಬೈನಲ್ಲಿ ಗಣೇಶನಿಗೆ ಅದ್ದೂರಿ ವಿದಾಯ : 37,000 ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ

ವಾಣಿಜ್ಯ ನಗರಿ ಮುಂಬೈ ಜನತೆ ಈ ಬಾರಿ ತಮ್ಮ ನೆಚ್ಚಿನ ಗಣೇಶನಿಗೆ ಅದ್ದೂರಿ ವಿದಾಯ ಹೇಳಿದ್ದು, ಬುಧವಾರ ಬೆಳಿಗ್ಗೆ ನಗರಾದ್ಯಂತ 37,000 ಕ್ಕೂ ಹೆಚ್ಚು ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿಸರ್ಜನೆ

ಮುಂಬೈ: ವಾಣಿಜ್ಯ ನಗರಿ ಮುಂಬೈ ಜನತೆ ಈ ಬಾರಿ ತಮ್ಮ ನೆಚ್ಚಿನ ಗಣೇಶನಿಗೆ ಅದ್ದೂರಿ ವಿದಾಯ ಹೇಳಿದ್ದು, ಬುಧವಾರ ಬೆಳಿಗ್ಗೆ ನಗರಾದ್ಯಂತ 37,000 ಕ್ಕೂ ಹೆಚ್ಚು ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣೇಶ ಹಬ್ಬದ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ ಆರಂಭವಾದ ವಿಸರ್ಜನೆ ಮೆರವಣಿಗೆಗಳು ರಾತ್ರಿಯಿಡೀ ಸುಗಮವಾಗಿ ನಡೆದಿದ್ದು, ನಗರದ ಕಡಲತೀರಗಳು, ಕೆರೆಗಳು ಮತ್ತು ಕೃತಕ ಕೊಳಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಬುಧವಾರ ಬೆಳಗ್ಗೆ 6 ಗಂಟೆ ವೇಳೆಗೆ ಮುಂಬೈನ ವಿವಿಧ ಕಡೆಗಳಲ್ಲಿ ಒಟ್ಟು 37,064 ಗಣೇಶ ಮತ್ತು ಗೌರಿಯ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಇವುಗಳಲ್ಲಿ 5,762 ‘ಸಾರ್ವಜನಿಕ’ (ಸಮುದಾಯ ಗುಂಪುಗಳು) ಮೂರ್ತಿಗಳು ಸೇರಿವೆ. ಒಟ್ಟು 11,713 ಮೂರ್ತಿಗಳನ್ನು ಕೃತಕವಾಗಿ ನಿರ್ಮಾಣ ಮಾಡಲಾದ ಕೊಳಗಳಲ್ಲಿ ಮುಳುಗಿಸಲಾಗಿದೆ. ನಗರದಾದ್ಯಂತ ಕೊಳಗಳನ್ನು ಸ್ಥಾಪಿಸಲಾಗಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದರು.

Ad
Ad
Nk Channel Final 21 09 2023