ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ಕಳೆದ ಗುರುವಾರ (ಡಿ.26) ನಿಧನರಾಗಿದ್ದು, ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಬೆಳಗ್ಗೆ 11:45ಕ್ಕೆ ದೆಹಲಿಯ ನಿಗಮ್ ಬೋಧ್ ಘಾಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಈ ಕುರಿತು ನಿನ್ನೆಯೇ ಸ್ಪಷ್ಟಪಡಿಸಿದೆ. ಬೆಳಗ್ಗೆ 8-30 ಗಂಟೆಯಿಂದ 9-30ರವರೆಗೆ ಎಐಸಿಸಿ ಕಚೇರಿಯಲ್ಲಿ ಸಿಂಗ್ ಅವರಿಗೆ ಗೌರವ ಸಲ್ಲಿಕೆಗೆ ಅವಕಾಶವಿದೆ.
ನಂತರ ಎಐಸಿಸಿ ಕಚೇರಿಯಿಂದ ರಾಜ್ಘಾಟ್ವರೆಗೆ ಪಾರ್ಥೀವ ಶರೀರದ ಮೆರವಣಿಗೆ ಸಾಗಲಿದೆ. ಈ ದಿನ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಗಾಗಿ ವ್ಯವಸ್ಥೆ ಮಾಡಲಾಗಿದೆ. ಸಿಂಗ್ ವಿಧಿವಶ ನಿಮಿತ್ತ ಜ.1ರವರೆಗೆ ಶೋಕಾಚಾರಣೆ ಘೋಷಿಸಲಾಗಿದೆ.