Ad

ಅಸ್ಸಾಂನಲ್ಲಿ ಧಾರಾಕಾರ ಮಳೆಗೆ ಪ್ರವಾಹ : 52 ಮಂದಿಯ ಜೀವ ಕಸಿದುಕೊಂಡ ಬಲಿ

ಕೆಲವು ದಿನಗಳಿಂದ ಹಲವೆಡೆ ಧಾರಕಾರ ಮಳೆ ಸುರಿಯುತ್ತಿದೆ. ಪರಿಣಾಮ ಹಲವೆಡೆ ಜಲಾವೃತವಾಗಿದೆ. ಕರ್ನಾಟಕ ಮಲೆನಾಡು, ಕರಾವಳಿ ಮುಂತಾದ ಭಾಗಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ಅಸ್ಸಾಂ  : ಕೆಲವು ದಿನಗಳಿಂದ ಹಲವೆಡೆ ಧಾರಕಾರ ಮಳೆ ಸುರಿಯುತ್ತಿದೆ. ಪರಿಣಾಮ ಹಲವೆಡೆ ಜಲಾವೃತವಾಗಿದೆ. ಕರ್ನಾಟಕ ಮಲೆನಾಡು, ಕರಾವಳಿ ಮುಂತಾದ ಭಾಗಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಇತ್ತ ಉತ್ತರ ಭಾರತದಲ್ಲಿಯೂ ಪ್ರವಾಹ ಸಂಕಷ್ಟ ತಂದಿತ್ತಿದೆ. ಅದರಲ್ಲಿಯೂ ಅಸ್ಸಾಂನಲ್ಲಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಸುಮಾರು 52 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ.

Ad
300x250 2

ನೆರೆಯಿಂದಾಗಿ ಅಂದಾಜು 24 ಲಕ್ಷ ಮಂದಿ ತೊಂದರೆಗೆ ಒಳಗಾಗಿದ್ದಾರೆ. ರಾಜ್ಯದ ಮುಕ್ಕಾಲು ಭಾಗಗಳಲ್ಲಿ ನೆರೆ ಆವರಿಸಿದೆ. ರಾಜ್ಯದ 35 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ತೀವ್ರವಾಗಿ ಪ್ರವಾಹದ ಹೊಡೆತಕ್ಕೆ ಸಿಲುಕಿವೆ.

ಇನ್ನು ಈಶಾನ್ಯ ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆಅಸ್ಸಾಂನ ಬಾರ್ಪೇಟಾ ಜಿಲ್ಲೆ ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಸುಮಾರು 1,40,000 ಜನರ ಮೇಲೆ ಪ್ರಭಾವ ಬೀರಿದೆ. ಇಲ್ಲಿನ ಸುಮಾರು 179 ಗ್ರಾಮಗಳು ಮುಳುಗಿವೆ ಮತ್ತು ಸುಮಾರು 1,571.5 ಹೆಕ್ಟೇರ್ ಬೆಳೆ ನಾಶವಾಗಿದೆ. ಧುಬ್ರಿ ಜಿಲ್ಲೆಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ 775,721 ಜನರು ಬಾಧಿತರಾಗಿದ್ದು, ಪ್ರವಾಹದಿಂದ 63,490.97 ಹೆಕ್ಟೇರ್ ಬೆಳೆ ಮುಳುಗಿದೆ. 3,518 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ.

 

Ad
Ad
Nk Channel Final 21 09 2023
Ad