ನೇಪಾಳ : ಪ್ರಾಕೃತಿಕ ವಿಕೋಪ, ವರುಣಾರ್ಭಟದಿಂದ ಪ್ರವಾಹ, ಭೂಕುಸಿತ ನೇಪಾಳವನ್ನು ನಲುಗುವಂತೆ ಮಾಡಿದೆ. ಇದುವರೆಗೂ ಕನಿಷ್ಠ 192 ಜನರು ಸಾವನ್ನಪ್ಪಿದ್ದು, 32 ಜನ ಕಾಣೆಯಾಗಿದ್ದಾರೆ. ಇಲ್ಲಿನ ಶೋಚನೀಯ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಭಾರತ ನೆರೆಯ ರಾಷ್ಟ್ರ ನೇಪಾಳಕ್ಕೆ ಸ್ನೇಹಪೂರ್ವಕ ಸಲಹೆಯನ್ನು ನೀಡಿದೆ.
ನೇಪಾಳದಲ್ಲಿನ ದುರ್ಗಮ ಪರಿಸ್ಥಿತಿಯ ಹಿನ್ನಲೆ ಭಾರತೀಯ ರಾಯಭಾರ ಕಚೇರಿ ನೇಪಾಳ ಆಡಳಿತದ ಜೊತೆ ಸಂಪರ್ಕದಲಿದ್ದು ಅಗತ್ಯ ಸಹಾಯಕ್ಕೂ ಮುಂದಾಗಿದೆ. ಜೊತೆಗೆ ಅಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಪ್ರಯತ್ನಗಳಿಗೂ ಮುಂದಾಗಿದೆ.
Ad