ಗಾಂಧಿನಗರ: ದುಷ್ಕರ್ಮಿಗಳು ರೈಲು ಹಳಿಯ ಫಿಶ್ ಪ್ಲೇಟ್ ಕಟ್ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಸೂರತ್‌ನ ಕಿಮ್ ರೈಲು ನಿಲ್ದಾಣದ ಬಳಿ ದುಷ್ಕರ್ಮಿಗಳು ರೈಲ್ವೇ ಟ್ರ್ಯಾಕ್‌ನಿಂದ ಫಿಶ್‌ಪ್ಲೇಟ್‌ಗಳು ಮತ್ತು ಕೀಗಳನ್ನು ತೆಗೆದಿದ್ದಾರೆ. ಫಿಶ್ ಪ್ಲೇಟ್‌ಗಳನ್ನು ತೆಗೆದ ಬಳಿಕ ಅದೇ ಟ್ರ್ಯಾಕ್‌ನಲ್ಲಿ ಇರಿಸಿದ್ದಾರೆ.
ಕೆಲವು ಅಪರಿಚಿತ ದುಷ್ಕರ್ಮಿಗಳು ಉತ್ತರಪ್ರದೇಶ ಲೈನಿನ ಕೆಲವು ಫಿಶ್ ಪ್ಲೇಟ್‌ಗಳು ಮತ್ತು ಕೀಗಳನ್ನು ತೆರೆದು ಅದೇ ಟ್ರ್ಯಾಕ್‌ನಲ್ಲಿ ಇರಿಸಿದ್ದರು. ರೈಲ್ವೇಯ ರೈಲು ಮ್ಯಾನ್‌ಗಳು ಟ್ರಾಕ್ ಪರಿಶೀಲನೆ ನಡೆಸುತ್ತಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ.
ರೈಲು ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಪಶ್ಚಿಮ ರೈಲ್ವೆಯ ವಡೋದರ ವಿಭಾಗ ತಿಳಿಸಿದೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
https://x.com/ANI/status/1837321111630958733?
Ad