Ad

ಫೋನ್​​ ನೋಡಿದ್ದು ಸಾಕು ಎಂದು ಗದರಿದ ಪೋಷಕರ ವಿರುದ್ದ ಎಫ್ಐಆರ್ ದಾಖಲು!

ಫೋನ್​​ ನೋಡಿದ್ದು ಸಾಕು ಎಂದು ಗದರಿಸಿದ ಪೋಷಕರ ವಿರುದ್ದ ಇಬ್ಬರು ಮಕ್ಕಳು ಎಫ್ಐಆರ್ ದಾಖಲಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಮಧ್ಯಪ್ರದೇಶ: ಫೋನ್​​ ನೋಡಿದ್ದು ಸಾಕು ಎಂದು ಗದರಿಸಿದ ಪೋಷಕರ ವಿರುದ್ದ ಇಬ್ಬರು ಮಕ್ಕಳು ಎಫ್ಐಆರ್ ದಾಖಲಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

21 ವರ್ಷದ ಯುವತಿ ಆಕೆಯ 8 ವರ್ಷದ ಸಹೋದರನೊಂದಿಗೆ ಚಂದನ್ ನಗರ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪೊಲೀಸರು ಪೋಷಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಇದನ್ನು ಪ್ರಶ್ನಿಸಿ ದಂಪತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಜಿಲ್ಲಾ ನ್ಯಾಯಾಲಯದಲ್ಲಿ ದಂಪತಿ ವಿರುದ್ಧ ಆರಂಭವಾದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ವಕೀಲ ಧರ್ಮೇಂದ್ರ ಚೌಧರಿ ಅವರ ಪ್ರಕಾರ, ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, 2021 ರ ಅಕ್ಟೋಬರ್ 25 ರಂದು ಮಕ್ಕಳು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಮೊಬೈಲ್ ಬಳಸಿದರೆ ಮನೆಯಲ್ಲಿ ಅಪ್ಪ ಅಮ್ಮ ಹೊಡೆಯುತ್ತಾರೆ, ಗದರಿಸುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಾಲಕರ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ದಾಖಲಾದ ನಂತರ ಇಬ್ಬರೂ ಮಕ್ಕಳು ತಮ್ಮ ಚಿಕ್ಕಮ್ಮನೊಂದಿಗೆ ವಾಸಿಸುತ್ತಿರುವುದಾಗಿ ವರದಿಯಾಗಿದೆ.

Ad
Ad
Nk Channel Final 21 09 2023