ಉತ್ತರಾಖಂಡದಲ್ಲಿ ದುಷ್ಕರ್ಮಿಗಳು ರೈಲು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ. ರೂರ್ಕಿಯ ಧನೇರಾ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಗ್ಯಾಸ್ ಸಿಲಿಂಡರ್ ಪತ್ತೆಯಾದ ಸ್ಥಳವು ಬಂಗಾಳ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್‌ನ ಪ್ರಧಾನ ಕಚೇರಿಗೆ ಸಮೀಪದಲ್ಲಿರುವ ಕಾರಣ ಸೂಕ್ಷ್ಮ ಪ್ರದೇಶವಾಗಿದೆ. ಸೇನಾ ವಾಹನಗಳು ಮತ್ತು ಸಿಬ್ಬಂದಿಯನ್ನು ಸರಕು ರೈಲುಗಳ ಮೂಲಕ ವಿವಿಧ ಪೋಸ್ಟ್‌ಗಳಿಗೆ ಸಾಗಿಸುವುದು ಸೇರಿದಂತೆ ಈ ಪ್ರದೇಶವನ್ನು ಮಿಲಿಟರಿಯವರು ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಹಳಿಗಳ ಮೇಲೆ ಸಿಲಿಂಡರ್ ಪತ್ತೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ಸಿಲಿಂಡರ್ ಕಂಡ ಕೂಡಲೇ ಲೋಕೊ ಪೈಲಟ್ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ. ಘಟನೆಯನ್ನು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಸಿಲಿಂಡರ್ ತೆಗೆದಿದ್ದಾರೆ
Ad