Ad

ರಾಜ್ಯ ಸರ್ಕಾರದಿಂದ ರೈತರ 2 ಲಕ್ಷವರೆಗಿನ ಬೆಳೆ ಸಾಲ ಮನ್ನಾ!

ರೈತರು ಬ್ಯಾಂಕುಗಳಿಂದ 2 ಲಕ್ಷ ರೂಪಾಯಿವರೆಗೆ ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಹೇಳಿದ್ದಾರೆ.

ಹೈದರಾಬಾದ್: ರೈತರು ಬ್ಯಾಂಕುಗಳಿಂದ 2 ಲಕ್ಷ ರೂಪಾಯಿವರೆಗೆ ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಹೇಳಿದ್ದಾರೆ.

Ad
300x250 2

ಸಿಎಂ ರೇವಂತ್ ರೆಡ್ಡಿಯವರು ಮಾಧ್ಯಮಗಳೊಂದಿಗೆ ಮಾತನಾಡಿ, 2022ರಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ರೈತರ ಸಾಲ ಮನ್ನಾ ಮಾಡುವುದಾಗಿ ರಾಜ್ಯದ ರೈತರಿಗೆ ಭರವಸೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್​​ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಕೂಡ ಮಾತು ಕೊಟ್ಟಿದ್ದರು.

ಆ ಮಾತನ್ನು ಇದೀಗ ನೆರವೇರಿಸಲಾಗುತ್ತಿದೆ. ವಾರಂಗಲ್ಲನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಹುಲ್ ಗಾಂಧಿಯವರ ಭರವಸೆಯಂತೆ 2 ಲಕ್ಷ ರೂ.ಗಳವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಡಿಸೆಂಬರ್ 12, 2018 ರಿಂದ ಡಿಸೆಂಬರ್ 9, 2023 ರವರೆಗಿನ ರೈತರ ಎಲ್ಲಾ ಸಾಲಗಳನ್ನು ಒಂದೇ ಬಾರಿಗೆ ಮನ್ನಾ ಮಾಡಲಾಗುವುದು. ಈ ಉದ್ದೇಶಕ್ಕಾಗಿ 31 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾದಿಂದ 47 ಲಕ್ಷ ರೈತರಿಗೆ ಇದು ಲಾಭವಾಗಲಿದೆ.

ಇದರಿಂದ ರಾಜ್ಯಕ್ಕೆ ಹೊರೆಯಾಗಲಿದ್ದು ಇದನ್ನು ಸರಿದೂಗಿಸಿಕೊಂಡು ಹೋಗುತ್ತೇವೆ. ಅದೇ ರೀತಿ ರೈತರ ಯೋಜನೆ ಭರೋಸಾ ಅನುಷ್ಠಾನ ತರಲು ಸಚಿವ ಸಂಪುಟ, ಉಪ ಸಮಿತಿ ರಚನೆ ಮಾಡಿದೆ.

ಜುಲೈ 15ರೊಳಗೆ ಸಚಿವ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ನೀಡಲಿದ್ದು, ಅದರ ಆಧಾರದ ಮೇಲೆ ರೈತರ ವಿಮಾ ಪಾಲಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad