Ad

ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ಕು ಮಂದಿ ಬಲಿ

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ  ಸಾವನ್ನಪ್ಪಿದ್ದಾರೆ. ಮುಂಜಾನೆ ಕಾಡಾನೆಯೊಂದು ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಇದಾದ ಬಳಿಕ ರಾತ್ರಿ ಇಬ್ಬರು ಮಹಿಳೆಯರನ್ನು ತುಳಿದು ಕೊಂದಿದೆ.

ಜಿಲ್ಲೆಯ ಕಟ್ಘೋರಾ ಅರಣ್ಯ ವಿಭಾಗದ ವ್ಯಾಪ್ತಿಯ ಖೈರಭವನ ಗ್ರಾಮದಲ್ಲಿ ತೀಜ್ಕುನ್ವರ್ ಮತ್ತು ಸುರುಜಾ ಎಂಬ ಇಬ್ಬರು ಮಹಿಳೆಯರು ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಕೋರ್ಬಾ ಅರಣ್ಯ ವಿಭಾಗದ ಕರ್ತಾಲಾ ಅರಣ್ಯ ಪ್ರದೇಶದಲ್ಲಿ ಎಂಟು ಆನೆಗಳ ಗುಂಪು ತಿರುಗಾಡುತ್ತಿತ್ತು. ಒಂದು ಆನೆ ತನ್ನ ಹಿಂಡಿನಿಂದ ಬೇರ್ಪಟ್ಟಿದೆ ಎನ್ನಲಾಗಿದೆ.

ಬುಧವಾರ ರಾತ್ರಿಯೇ ರಾಲಿಯಾ ಗ್ರಾಮಕ್ಕೆ ಬಂದಿದ್ದ ಆನೆ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಗಾಯತ್ರಿ ರಾಥೋಡ್‌ ಅವರನ್ನು ಕೂಡ ಹತ್ಯೆ ಮಾಡಿದೆ.

Ad
Ad
Nk Channel Final 21 09 2023