ಪಂಜಾಬ್: ಪಂಜಾಬ್ ನ ಜೈಜೋನ್ ಚೋ ಪ್ರವಾಹದಲ್ಲಿ ಭಾನುವಾರ(ಆಗಸ್ಟ್11 )SUV ವಾಹನ ಕೊಚ್ಚಿ ಹೋಗಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮೆಹತ್‌ಪುರ ಬಳಿಯ ಡೆಹ್ರಾದಿಂದ ಎಸ್‌ಬಿಎಸ್ ನಗರದ ಮೆಹ್ರೋವಾಲ್ ಗ್ರಾಮಕ್ಕೆ ಮದುವೆಗೆಂದು ಚಾಲಕನೊಂದಿಗೆ ಕುಟುಂಬದ ಹತ್ತು ಮಂದಿ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ, ಇಬ್ಬರು ಮಹಿಳೆಯರ ಸೇರಿದಂತೆ ಏಳು ಮೃತದೇಹಗಳನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ. ನಾಪತ್ತೆಯಾಗಿರುವ ಮೂವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
Ad