Bengaluru 25°C
Ad

ಬಿಜೆಪಿಗೆ ಹೊಡೆತ ಬಿದ್ದಿದ್ದು ಎಷ್ಟು ರಾಜ್ಯಗಳಲ್ಲಿ..?

Pm Modi

ದೆಹಲಿ: 400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್​ಡಿಎಗೆ ಈ ಬಾರಿ 300 ಸೀಟು ಕೂಡಾ ದಕ್ಕಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತವನ್ನೂ ತಲುಪಿಲ್ಲ. ಎನ್‌ಡಿಎ ಮೈತ್ರಿ ಪಕ್ಷಗಳ ಬಲ ಮ್ಯಾಜಿಕ್ ನಂಬರ್​​ಗಿಂತಲೂ ಕೆಲವೇ ಸೀಟುಗಳು ಹೆಚ್ಚು ಬಂದಿವೆ. ಈ ಬಾರಿ ಬಿಜೆಪಿಗೆ ಹೊಡೆತ ಬಿದ್ದಿದ್ದೆಲ್ಲಿ ಗೊತ್ತಾ. . ?

ಈ ಬಾರಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ ಅಲ್ಲದೇ ಪಂಜಾಬ್​​​ನಲ್ಲೂ ಬಿಜೆಪಿ ನೀರಸ ಫಲಿತಾಂಶ ತೋರಿದೆ… ಅದರಲ್ಲೂ ಉತ್ತರ ಪ್ರದೇಶವೊಂದರಲ್ಲೇ ಬಿಜೆಪಿ 30 ಸೀಟುಗಳನ್ನ ಕಳೆದುಕೊಂಡಿದೆ. ರಾಮನ ವಿಚಾರದಲ್ಲಿ ಸದಾ ಮೈಲೇಜ್​​ನಲ್ಲಿದ್ದ ಬಿಜೆಪಿಗೆ ಅದ್ಯಾಕೋ ಶ್ರೀರಾಮ ಕೃಪೆ ತೋರಿದಂತಿಲ್ಲ, ರಾಮಜನ್ಮಭೂಮಿ ಅಯೋಧ್ಯೆಯಲ್ಲೇ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್, ಇಂಡಿಯಾ ಒಕ್ಕೂಟದ ಅಭ್ಯರ್ಥಿ ಅವದೇಶ್ ಪ್ರಸಾದ್ ಎದುರು ಸೋಲು ಕಂಡಿದ್ದಾರೆ.

ಮತ್ತೊಂದೆಡೆ 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಬಿಜೆಪಿ ಈ ಬಾರಿ 14 ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಗಳಿಸಿದ್ದಾರೆ.

ಮಹಾರಾಷ್ಟ್ರದಲ್ಲೂ ಎನ್​ಡಿಎ ಮೈತ್ರಿಕೂಟ ಕ್ಷೇತ್ರಬಲ ಕುಗ್ಗಿದೆ. ಒಟ್ಟು 48 ಕ್ಷೇತ್ರಗಳಲ್ಲಿ ಈ ಬಾರಿ 18 ಸ್ಥಾನಗಳನ್ನಷ್ಟೇ ಪಡೆದಿದೆ.

ಇತ್ತ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಮೈತ್ರಿಯೊಂದಿಗೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿ ನಿರಾಸೆ ಅನುಭವಿಸಿದೆ. ಕಳೆದ ಬಾರಿಗಿಂತ 7 ಸ್ಥಾನಗಳನ್ನು ಕಳೆದುಕೊಂಡಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ಬೀದರ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೋಲು ಕಂಡಿದೆ.

Ad
Ad
Nk Channel Final 21 09 2023
Ad