Bengaluru 24°C
Ad

ಗುಜರಾತ್‌ನ ಕಛ್‌ ಪ್ರದೇಶದಲ್ಲಿ 3.3 ತೀವ್ರತೆಯ ಭೂಕಂಪನ!

ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 10.05ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದೆ ಎಂದು ಗಾಂಧಿನಗರದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ದೃಢಪಡಿಸಿದೆ.

ಅಹಮದಾಬಾದ್: ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 10.05ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದೆ ಎಂದು ಗಾಂಧಿನಗರದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ದೃಢಪಡಿಸಿದೆ.

ಯಾವುದೇ ಸಾವು–ನೋವು ಸಂಭವಿಸಿದ ವರದಿಯಾಗಿಲ್ಲ. ರಾಜ್ಯದಲ್ಲಿ ಈ ತಿಂಗಳಿನಲ್ಲಿ ಸೌರಾಷ್ಟ್ರ-ಕಛ್ ಪ್ರದೇಶದಲ್ಲಿ ದಾಖಲಾದ 3ಕ್ಕಿಂತ ಹೆಚ್ಚು ತೀವ್ರತೆಯ ನಾಲ್ಕನೇ ಕಂಪನ ಇದಾಗಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಾರ, 200 ವರ್ಷಗಳಲ್ಲಿ ರಾಜ್ಯದಲ್ಲಿ 9 ಪ್ರಮುಖ ಭೂಕಂಪಗಳು ಸಂಭವಿಸಿವೆ. 2001ರ ಕಛ್‌ನಲ್ಲಿ ಸಂಭವಿಸಿದ ಭೂಕಂಪವು ಭಾರತದಲ್ಲಿ ಸಂಭವಿಸಿದ 3ನೇ ಅತಿ ದೊಡ್ಡ ಭೂಕಂಪವಾಗಿದೆ ಎಂದಿದೆ.

Ad
Ad
Nk Channel Final 21 09 2023