Bengaluru 28°C
Ad

ಮಾದಕವಸ್ತು ಕಳ್ಳಸಾಗಣೆ: ಬಂಧಿತರಿಂದ 105 ಕೆ.ಜಿ ಹೆರಾಯಿನ್ ವಶ

ಗಡಿಯಾಚೆಗಿನ ಕಳ್ಳಸಾಗಣೆ ಪಂಜಾಬ್‌ ಪೊಲೀಸರು ಭೇಧಿಸಿದ್ದು, ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಚಂಡೀಗಢ: ಗಡಿಯಾಚೆಗಿನ ಕಳ್ಳಸಾಗಣೆ ಪಂಜಾಬ್‌ ಪೊಲೀಸರು ಭೇಧಿಸಿದ್ದು, ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ 105 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ನವಜೋತ್ ಸಿಂಗ್ ಮತ್ತು ಲವ್‌ಪ್ರೀತ್ ಕುಮಾರ್ ಬಂಧಿತರು. ಜಲಮಾರ್ಗ ಮೂಲಕ ಪಾಕಿಸ್ತಾನದಿಂದ ಡ್ರಗ್ಸ್ ಸಾಗಿಸಲಾಗುತ್ತಿತ್ತು. ಆರೋಪಿಗಳಿಂದ ರಬ್ಬರ್ ಟ್ಯೂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್‌ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.

‘ಗುಪ್ತಚರ ಮಾಹಿತಿ ಮೇರೆಗೆ ಪಂಜಾಬ್‌ ಪೊಲೀಸರು ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿದ್ದಾರೆ. ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರ ನವಪ್ರೀತ್ ಸಿಂಗ್ ಅಲಿಯಾಸ್‌ ನವ್ ಭುಲ್ಲರ್‌ನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಬಂಧಿತರಿಂದ 105 ಕೆ.ಜಿ ಹೆರಾಯಿನ್, 31.93 ಕೆ.ಜಿ ಕೆಫೀನ್ ಅನ್‌ಹೈಡ್ರಸ್, 17 ಕೆ.ಜಿ ಡಿಎಂಆರ್, 5 ವಿದೇಶಿ ನಿರ್ಮಿತ ಹಾಗೂ 1 ದೇಶಿಯ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

https://x.com/DGPPunjabPolice/status/1850361878914175386?

Ad
Ad
Nk Channel Final 21 09 2023