ಡಿಲಿ: ಆಗ್ನೇಯ ಏಷ್ಯಾದ ರಾಷ್ಟ್ರ ಟಿಮೋರ್-ಲೆಸ್ಟೆ ಯ ಅತ್ಯುನ್ನತ ಗೌರವ ಪ್ರಶಸ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ (ಆಗಸ್ಟ್ 10 ) ರಂದು ಭಾಜನರಾಗಿದ್ದಾರೆ.ಟಿಮೋರ್-ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್ ಹೊರ್ಟಾ ಅವರು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದ್ರೌಪದಿ ಮುರ್ಮು ”ಈ ವಿಶೇಷ ಸಂವಾದಾತ್ಮಕ ಅಧಿವೇಶನಕ್ಕಾಗಿ ಅಧ್ಯಕ್ಷ ಹೋರ್ಟಾ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಇದು ಭಾರತ ಮತ್ತು ಭಾರತೀಯರ ಬಗ್ಗೆ ಅವರ ಪ್ರೀತಿ ಮತ್ತು ಗೌರವದ ಅಭಿವ್ಯಕ್ತಿಯಾಗಿದೆ.
‘ಗ್ರ್ಯಾಂಡ್ ಕೊಲಾರ್ ಆಫ್ ದಿ ಆರ್ಡರ್’ ಪ್ರಶಸ್ತಿ ನನಗೆ ನೀಡಿರುವುದು ಇದೇ ಭಾವನೆಯ ಪುರಾವೆ. ಟಿಮೋರ್-ಲೆಸ್ಟೆಯೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಸಂಬಂಧಗಳು ಪ್ರಜಾಪ್ರಭುತ್ವದ ಹಂಚಿಕೆಯ ತತ್ವಗಳನ್ನು ಆಧರಿಸಿವೆ ಎಂದಿದ್ದಾರೆ.
ಒಂದು ಕಾಲದಲ್ಲಿ ಮಹಿಳೆಯರು ತಮ್ಮ ಮನೆಯೊಳಗೆ ಇರುತ್ತಿದ್ದರು, ಆದರೆ ಈಗ ಎಲ್ಲರೂ ಅರ್ಥಮಾಡಿಕೊಂಡಿದ್ದು ಮುಂದೆ ಸಾಗಲು ಮತ್ತು ತಮ್ಮ ಕುಟುಂಬ, ಸಮಾಜ ಮತ್ತು ದೇಶವನ್ನು ಮುನ್ನಡೆಸಲು ಬಯಸುತ್ತಾರೆ” ಎಂದರು.