Bengaluru 22°C
Ad

ವಾಟ್ಸಾಪ್ ಸಂದೇಶಗಳಿಗೆ ಮಾರುಹೋಗಬಾರದು: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ಇತ್ತೀಚೆಗೆ ರಾಜಕೀಯ, ಆರೋಗ್ಯ, ಪ್ರಚಲಿತ ವಿದ್ಯಮಾನ, ರಾಷ್ಟ್ರಭಕ್ತಿ.. ಹೀಗಿ ಯಾವುದೇ ವಿಚಾರವಾಗಿರಲಿ ಅದರ ಬಗ್ಗೆ ಸುಳ್ಳು ಸುದ್ದಿಗಳು ಎಗ್ಗಿಲ್ಲದೆ ಹಬ್ಬುತ್ತಿವೆ.

ನವದೆಹಲಿ : ಇತ್ತೀಚೆಗೆ ರಾಜಕೀಯ, ಆರೋಗ್ಯ, ಪ್ರಚಲಿತ ವಿದ್ಯಮಾನ, ರಾಷ್ಟ್ರಭಕ್ತಿ.. ಹೀಗಿ ಯಾವುದೇ ವಿಚಾರವಾಗಿರಲಿ ಅದರ ಬಗ್ಗೆ ಸುಳ್ಳು ಸುದ್ದಿಗಳು ಎಗ್ಗಿಲ್ಲದೆ ಹಬ್ಬುತ್ತಿವೆ. ಕೈಯಲ್ಲಿ ಮೊಬೈಲ್‌ ಬಂದಾಗಿನಿಂದ ಮಾಹಿತಿ ಕ್ರಾಂತಿಯೇನೋ ಆಗಿದೆ ಆದರೆ ಸುಳ್ಳು ಮಾಹಿತಿಯ ದುರಂತ ಕ್ರಾಂತಿಯೂ ಹೆಚ್ಚಾಗಿದೆ.

Ad

ಫೇಸ್‌ಬುಕ್‌, ವಾಟ್ಸಾಪ್‌ನಂತಹ ಅಪ್ಲಿಕೇಷನ್‌ಗಳ ಮೂಲಕ ತಪ್ಪು ಮಾಹಿತಿ ಹೆಚ್ಚು ಹರಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಕಳವಳ ವ್ಯಕ್ತಪಡಿಸಿದ್ದು ಈ ಬಗ್ಗೆ ಎಚ್ಚರದಿಂದಿರಿ ಎಂದಿದ್ದಾರೆ

Ad

ಒ ಪಿ ಜಿಂದಾಲ್ ಗ್ಲೋಬಲ್ ಲಾ ಯೂನಿವರ್ಸಿಟಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಭಾರತದ ಸಂವಿಧಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನ್‌ಲೈನ್ ವೇದಿಕೆಗಳ ಮೂಲಕ ನಕಲಿ ಸುದ್ದಿ ಇನ್ನಿತರ ತಪ್ಪು ಮಾಹಿತಿ ಹರಡುವುದಕ್ಕೆ ವಿಡಂಬನೆಯ ರೂಪದಲ್ಲಿ ಬಳಸುವ ʼವಾಟ್ಸಾಪ್‌ ಯೂನಿವರ್ಸಿಟಿʼ ಎಂಬ ಪದವನ್ನು ಉಲ್ಲೇಖಿಸಿ ವಾಟ್ಸಾಪ್‌ ಯೂನಿವರ್ಸಿಟಿ ಸಂದೇಶಗಳಿಗೆ ಮರುಳಾಗದಂತೆ ಎಚ್ಚರಿಕೆ ನೀಡಿದರು.

Ad

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳು ಕಂಡುಬರುತ್ತಿದೆ. ಈ ವಾಟ್ಸಾಪ್ ಸಂದೇಶಗಳಿಗೆ ಮಾರುಹೋಗಬಾರದು. ಈ ತಪ್ಪು ಮಾಹಿತಿಗಳು ಸತ್ಯದ ಅವನತಿಯನ್ನು ಬಯಸುವಂಥದ್ದಾಗಿದ್ದು ಎಲ್ಲರೂ ವಿಚಾರಗಳನ್ನು ಎಚ್ಚರದಿಂದ ಗ್ರಹಿಸಬೇಕು ಎಂದಿದ್ದಾರೆ.

Ad
Ad
Ad
Nk Channel Final 21 09 2023