Bengaluru 28°C

5ನೇ ಮಹಡಿಯಿಂದ ಏಕಾಏಕಿ ಬಿದ್ದ ನಾಯಿ- 3 ವರ್ಷದ ಮಗು ಮೃತ್ಯು

ರಸ್ತೆಯಲ್ಲಿ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ 5ನೇ ಮಹಡಿಯಿಂದ ನಾಯಿಯೊಂದು ಮೂರುವರ್ಷದ ಮಗುವಿನ ಮೇಲೆ ಬಿದ್ದ ಪರಿಣಾಮ ಮಗು ಸಾವನಪ್ಪಿದೆ.

ಮಹಾರಾಷ್ಟ್ರ: ರಸ್ತೆಯಲ್ಲಿ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ 5ನೇ ಮಹಡಿಯಿಂದ ನಾಯಿಯೊಂದು ಮೂರುವರ್ಷದ ಮಗುವಿನ ಮೇಲೆ ಬಿದ್ದ ಪರಿಣಾಮ ಮಗು ಸಾವನಪ್ಪಿದೆ. ಘಟನೆ ಮುಂಬೈನ ಥಾಣೆಯ ಮುಂಬ್ರಾದಲ್ಲಿ ಮಂಗಳವಾರ (ಆಗಸ್ಟ್‌ 06) ನಡೆದಿದೆ.


ನಿನ್ನೆ ಮಧ್ಯಾಹ್ನ ಅಮೃತ್‌ ನಗರದಲ್ಲಿ ಈ ದುರಂತ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಗೋಲ್ಡನ್‌ ರಿಟ್ರೈವರ್‌ ತಳಿಯ ನಾಯಿ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 3 ವರ್ಷದ ಬಾಲಕಿ ಮೈಮೇಲೆ ಬಿದ್ದಿರುವ ದೃಶ್ಯ ಸೆರೆಯಾಗಿದೆ. ನಾಯಿ ಬೊಬ್ಬೆ ಹೊಡೆಯುತ್ತಾ ಕುಂಟುತ್ತಾ ಸಾಗುತ್ತಿರುವುದು ವಿಡಿಯೋದಲ್ಲಿದೆ.


ನಾಯಿ ಐದನೇ ಮಹಡಿಯಿಂದ ಬಿದ್ದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿತ್ತು. ಕೂಡಲೇ ಸುತ್ತಮುತ್ತಲಿನವರು ತಾಯಿಯ ಸಹಾಯಕ್ಕೆ ಆಗಮಿಸಿದ್ದು, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಗು ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.


Nk Channel Final 21 09 2023