ಲಾಹೋರ್: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಭಕ್ತರೊಬ್ಬರು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೊಡ್ಡ ದೇವಾಲಯವನ್ನು ನಿರ್ಮಿಸುವವರೆಗೆ 11 ವರ್ಷಗಳ ಕಾಲ ಚಪ್ಪಲಿಯನ್ನು ಧರಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಅವರು ಶ್ರೀರಾಮನ ಭಕ್ತರಾಗಿದ್ದಾರೆ. ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೇವಾಲಯವನ್ನು ನಿರ್ಮಿಸಿದಾಗ ಅವರು ರಾಮನ ದರ್ಶನಕ್ಕೆ ಸೈಕಲ್ನಲ್ಲಿ ತೆರಳಿದರು. ಇದೀಗ ರಾಮನ ದರ್ಶನದ ಬಳಿಕ 11 ವರ್ಷಗಳ ನಂತರ ಚಪ್ಪಲಿ ಧರಿಸಲಿದ್ದಾರೆ.
ರಾಮನ ಭಕ್ತ ಗಜಾನನ ಮಧ್ಯಪ್ರದೇಶದ ಲೋಣಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. 11 ವರ್ಷಗಳ ಹಿಂದೆ ನಾನು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ದೊಡ್ಡ ಮಂದಿರವನ್ನು ನಿರ್ಮಿಸಿದ ನಂತರ ಮತ್ತೆ ಬರುವುದಾಗಿ ಪ್ರತಿಜ್ಞೆ ಮಾಡಿದ್ದೆ. ಮಂದಿರ ನಿರ್ಮಾಣ ಆಗುವವರೆಗೂ ನಾನು ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದೆ. ಈಗ ಶ್ರೀರಾಮನ ದೊಡ್ಡ ದೇವಾಲಯವನ್ನು ನಿರ್ಮಿಸಲಾಗಿದೆ. ನಾನು ಸೈಕಲ್ನಲ್ಲಿ ಭಗವಾನ್ ಶ್ರೀರಾಮನ ಪಟ್ಟಣವಾದ ಅಯೋಧ್ಯೆಗೆ ತಲುಪಿ ರಾಮಲಲ್ಲಾನ ದರ್ಶನ ಪಡೆದೆ. ಈಗ 11 ವರ್ಷಗಳ ನಂತರ ಮತ್ತೆ ಚಪ್ಪಲಿ ಹಾಕಲು ಆರಂಭಿಸುತ್ತೇನೆ. ನಾನು 11 ವರ್ಷಗಳ ಕಾಲ ಚಪ್ಪಲಿ ಇಲ್ಲದೆ ಬದುಕಿದ್ದೇನೆ ಎಂದಿದ್ದಾರೆ.