Bengaluru 22°C
Ad

ಬಾಂಗ್ಲಾದ ಬಾವುಟ, ರಾಷ್ಟ್ರಗೀತೆ ಬದಲಿಸುವಂತೆ ಸರ್ಕಾರಕ್ಕೆ ಆಗ್ರಹ

ಪ್ರ ಕ್ರಾಂತಿ ಹಾಗೂ ವ್ಯಾಪಕ ಹಿಂಸಾಚಾರದ ಬಳಿಕ ಬಾಂಗ್ಲಾದೇಶದಲ್ಲಿ ನೂತನ ಸರ್ಕಾರ ಸ್ಥಾಪನೆಗೊಂಡಿದೆ.

ಡಾಕಾ : ಕ್ಷಿಪ್ರ ಕ್ರಾಂತಿ ಹಾಗೂ ವ್ಯಾಪಕ ಹಿಂಸಾಚಾರದ ಬಳಿಕ ಬಾಂಗ್ಲಾದೇಶದಲ್ಲಿ ನೂತನ ಸರ್ಕಾರ ಸ್ಥಾಪನೆಗೊಂಡಿದೆ. ಬಾಂಗ್ಲಾದ ಬಾವುಟ ಮತ್ತು ರಾಷ್ಟ್ರಗೀತೆಯನ್ನು ಬದಲಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಾಂಗ್ಲಾದ ಬಾವುಟವನ್ನು ನರೇನ್‌ ದಾಸ್‌ ಎಂಬ ಭಾರತೀಯರು ರಚಿಸಿದ್ದರು. ಬಾಂಗ್ಲಾದ ರಾಷ್ಟ್ರಗೀತೆಯನ್ನು ರವೀಂದ್ರ ನಾಥ ಟ್ಯಾಗೋರ್‌ ರಚಿಸಿದ್ದರು. ಬೇರೆ ಇಸ್ಲಾಂ ದೇಶಗಳಲ್ಲಿರುವಂತೆ ನಮ್ಮ ಧ್ವಜದಲ್ಲಿ ಇಸ್ಲಾಂನ ಯಾವುದೇ ಚಿಹ್ನೆಯಿಲ್ಲ ಎಂದು ಅಲ್ಲಿನ ಜಮಾತ್‌ ಹೇಳಿದೆ.

ಧ್ವಜದಲ್ಲಿರುವ ಹಸಿರು ಬಣ್ಣ ಸಮೃದ್ಧಿಯನ್ನು ಸೂಚಿಸಿದರೆ, ಮಧ್ಯದಲ್ಲಿರುವ ಕೆಂಪು ವೃತ್ತವು 1971 ರಲ್ಲಿ ಪಾಕಿಸ್ತಾನದೊಂದಿಗೆ ಪಾಕಿಸ್ತಾನದೊಂದಿಗೆ ನಡೆದ ಯುದ್ದದಲ್ಲಿ ಹುತಾತ್ಮರಾದವರ ಸ್ಮರಣೆಗಾಗಿ ರಚಿಸಲಾಗಿದೆ.

Ad
Ad
Nk Channel Final 21 09 2023