Ad

ಎಐ ಮೇಲೆ ಹೆಚ್ಚಿನ ಗಮನ : 12,500 ಉದ್ಯೋಗಿಗಳ ವಜಾ ಮಾಡಿದ ಡೆಲ್‌!

ಡೆಲ್ ಟೆಕ್ನಾಲಜೀಸ್ ಕಳೆದ 15 ತಿಂಗಳುಗಳಲ್ಲಿ ಎರಡನೇ ಹಂತ ವಜಾ ಪ್ರಕ್ರಿಯೆಯನ್ನು ಘೋಷಣೆ ಮಾಡಿದೆ. ಕಂಪನಿಯು ಸುಮಾರು 12,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಇದು ಡೆಲ್‌ನ ಉದ್ಯೋಗಿಗಳ ಶೇ. 10ರಷ್ಟು ಎಂದು ಹೇಳಲಾಗಿದೆ. 

ನವದೆಹಲಿ: ಡೆಲ್ ಟೆಕ್ನಾಲಜೀಸ್ ಕಳೆದ 15 ತಿಂಗಳುಗಳಲ್ಲಿ ಎರಡನೇ ಹಂತ ವಜಾ ಪ್ರಕ್ರಿಯೆಯನ್ನು ಘೋಷಣೆ ಮಾಡಿದೆ. ಕಂಪನಿಯು ಸುಮಾರು 12,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಇದು ಡೆಲ್‌ನ ಉದ್ಯೋಗಿಗಳ ಶೇ. 10ರಷ್ಟು ಎಂದು ಹೇಳಲಾಗಿದೆ.

ಆಧುನಿಕ ಐಟಿ ಪರಿಹಾರಗಳು ಹಾಗೂ ಎಐ ಮೇಲೆ ಹೆಚ್ಚಿನ ಗಮನ ನೀಡುವ ಉದ್ದೇಶದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಅದರೊಂದಿಗೆ ಕಂಪನಿಯ ಕಾರ್ಯಾಚರಣೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸುವ ಪ್ರದೇಶಗಳಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿದೆ.

ಸುಮಾರು 12,500 ಉದ್ಯೋಗಿಗಳನ್ನು ಕೈಬಿಡಲಾಗಿದೆ.  ಇದು ಕಂಪನಿಯ ಶೇಕಡಾ ಹತ್ತರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ, ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ವ್ಯವಹಾರವನ್ನು ಮರುಹೊಂದಿಸುವ ಪ್ರಯತ್ನದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಈ ನಿರ್ಧಾರವನ್ನು ಗ್ಲೋಬಲ್ ಸೇಲ್ಸ್ ಮತ್ತು ಗ್ರಾಹಕ ಕಾರ್ಯಾಚರಣೆಗಳ ಅಧ್ಯಕ್ಷ ಬಿಲ್ ಸ್ಕ್ಯಾನೆಲ್ ಮತ್ತು ಗ್ಲೋಬಲ್ ಚಾನೆಲ್‌ಗಳ ಅಧ್ಯಕ್ಷ ಜಾನ್ ಬೈರ್ನ್ ಅವರು ಮೆಮೊ ಮೂಲಕ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಕಂಪನಿಯನ್ನಿ ನಿರ್ವಹಣೆ ಮಾಡುವ ಹಾಗೂ ಸುವ್ಯವಸ್ಥಿತಗೊಳಿಸುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ. ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸಲು ನೋವಿನ ಆದರೆ ಅಗತ್ಯ ಕ್ರಮಗಳ ಬಗ್ಗೆ ಸುಳಿವು ನೀಡಿದ್ದಾರೆ. ಎಕ್ಸಿಟ್‌ ಮೀಟಿಂಗ್‌ ಮೂಲಕ ಎಚ್‌ಆರ್‌ಗಳು ವಜಾ ಮಾಡಿರುವ ಕುರಿತಾಗಿ ತಿಳಿಸಿದ್ದಾರೆ.

Ad
Ad
Nk Channel Final 21 09 2023