Ad

ʼಪೊಲೀಸರೇ ಬನ್ನಿ ಅರೆಸ್ಟ್ ಮಾಡಿʼ ಎಂದು ಚಾಲೆಂಜ್ ಹಾಕಿದ ಸಂಸದೆ ಮಹುವಾ ಮೊಯಿತ್ರಾ

Mahua Moitra

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ದೆಹಲಿ ಪೊಲೀಸರು ಹೊಸ ಕ್ರಿಮಿನಲ್ ಕೋಡ್, ಭಾರತೀಯ ನ್ಯಾಯ ಸಂಹಿತಾ ಅಡಿ ಎಫ್​ಐಆರ್ ದಾಖಲು ಮಾಡಿದ್ದಾರೆ.

Ad
300x250 2

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಬಗ್ಗೆ ಅವಹೇಳನಾಕಾರಿ ಫೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸುಮಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಜುಲೈ 4 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ರೇಖಾ ಶರ್ಮಾ ಬರುತ್ತಿರುವ ವಿಡಿಯೋ ಫೋಸ್ಟ್ ಮಾಡಿದ್ದರು. ತನ್ನ ಬಾಸ್​ನ ಪೈಜಾಮಾ ಹಿಡಿದುಕೊಳ್ಳುವಲ್ಲಿ ನಿರತಳಾಗಿದ್ದಾರೆ ಎಂದು ಪೋಸ್ಟ್​ಗೆ ಅಡಿಲೈನ್​ ಬರೆದಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಫೋಸ್ಟ್​ ಡಿಲೀಟ್ ಮಾಡಿದ್ದರು. ಈ ಸಂಬಂಧ ಎಂಪಿ ಮೊಯಿತ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರ ಅಡಿ ದೆಹಲಿ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

ಇನ್ನು ಎನ್‌ಸಿಡಬ್ಲ್ಯು ತನ್ನ ದೂರಿನಲ್ಲಿ, ಮೊಯಿತ್ರಾ ಅವರು ಮಾಡಿದ್ದು ಅಸಭ್ಯ ಟೀಕೆಗಳು ಅತ್ಯಂತ ಅತಿರೇಕವಾಗಿವೆ. ಘನತೆಯಿಂದ ಬದುಕುವ ಮಹಿಳೆಯರ ಹಕ್ಕ ಅನ್ನು ಉಲ್ಲಂಘನೆ ಆಗಿದೆ ಎಂದು ಪೋಸ್ಟ್ ಮಾಡಿದೆ. ಸದ್ಯ ಈ ಪೋಸ್ಟ್​ಗೆ ಎಕ್ಸ್​​ನಲ್ಲೇ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸುಮಟೋ ಕೇಸ್​ ಆಧಾರದ ಮೇಲೆ ನನ್ನನ್ನು ಅರೆಸ್ಟ್ ಮಾಡಲು ದೆಹಲಿ ಪೊಲೀಸರೇ ಬನ್ನಿ. ತಕ್ಷಣ ಕ್ರಮ ತೆಗೆದುಕೊಳ್ಳಲು ಮುಂದಿನ 3 ದಿನಗಳಲ್ಲಿ ನನ್ನನ್ನು ಅರೆಸ್ಟ್ ಮಾಡಲು ಆದಷ್ಟು ಬೇಗ ನಾಡಿಯಾಗೆ ಬನ್ನಿ. ನಾನೇ ಸ್ವತಃ ಕೊಡೆ ಹಿಡಿಯಬಲ್ಲೆ ಎಂದು ಹೇಳಿದ್ದಾರೆ.

https://x.com/MahuaMoitra/status/1809196083849130086

 

Ad
Ad
Nk Channel Final 21 09 2023
Ad