Bengaluru 21°C
Ad

ರಾಷ್ಟ್ರಪತಿ ಭವನದಲ್ಲಿ ಕಾಣಿಸಿಕೊಂಡ ಪ್ರಾಣಿ ಬಗ್ಗೆ ಡೆಲ್ಲಿ ಪೊಲೀಸ್‌ ಸ್ಪಷ್ಟನೆ

ಜೂನ್‌ 9 ರಂದು ನರೇಂದ್ರ ಮೋದಿ ಸೇರಿದಂತೆ 72 ಸದಸ್ಯರು ಪ್ರಮಾಣವಚನ ಸಲ್ಲಿಸುವ ವೇಳೆ ರಾಷ್ಟ್ರಪತಿ ಭವನದದಲ್ಲಿ ನಿಗೂಢವಾದ ಪ್ರಾಣಿಯೊಂದು ಹಾದು ಹೋದ ದೃಶ್ಯಾವಳಿಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಈ ಬಗ್ಗೆ ಭಾರಿ ಚರ್ಚೆ ಕೂಡ ನಡೆದಿದ್ದು ಆದರೆ ಇದೀಗ ದೆಹಲಿ ಪೊಲೀಸರು ಈ ಸ್ಪಷ್ಟನೆ ನೀಡಿದ್ದಾರೆ.

ಅಂದು ರಾಷ್ಟ್ರಪತಿ ಭವನದದಲ್ಲಿ ನಿಗೂಢವಾದ ಪ್ರಾಣಿ ಸಿಂಹವೋ ಚಿರತೆಯೋ ಅಲ್ಲ ಅದು ಮಾಮೂಲಿಯಾಗಿ ಮನೆಯಲ್ಲಿ ಸಾಕುವ ಬೆಕ್ಕು ಎಂದು ಪೊಲೀಸರು ತಮ್ಮ ಅಧಿಕೃತ ಟ್ವೀಟ್‌ ಖಾತೆ ಮೂಲಕ ಸ್ಪಷ್ಟನೆ ನೀಡಿದೆ.

ಟಿವಿ ಮಾಧ್ಯಮಗಳಲ್ಲಿ ಆ ರಾಷ್ಟ್ರಪತಿ ಭವನದದಲ್ಲಿ ನಿಗೂಢವಾದ ಪ್ರಾಣಿ ಕಾಣಿಸಿಕೊಂಡಿದೆ ಎಂದು ಕಾಡು ಪ್ರಾಣಿ ಚಿರತೆ ಅಥವಾ ಸಿಂಹ ಆಗಿರಬೇಕು ಎಂದೆಲ್ಲಾ ಮಾಹಿತಿ ನೀಡಿದ್ದರು ಆದರೆ ಅದು ತಪ್ಪು . ಅದು ಯಾವುದೇ ಕಾಡು ಪ್ರಾಣಿಯಲ್ಲ ಅದೊಂದು ಬೆಕ್ಕು ಎಂದು ತಿಳಿಸಿದ್ದಾರೆ. ಹಾಗೂ ಇಂತಹ ಸುಳ್ಳು ಸತ್ಯಕ್ಕೆ ದೂರವಾದ ವರದಿಗಳನ್ನು ನಂಬಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.

Ad
Ad
Nk Channel Final 21 09 2023
Ad