ನವದೆಹಲಿ: ಗೂಗಲ್ ಈಗಾಗಲೆ ಹಲವಾರು ವೇದಿಕೆಗಳನ್ನು ತನ್ನ ಬಳಕೆದಾದರಿಗೆ ಒದಗಿಸಿಕೊಟ್ಟಿದೆ. ಅದರಲ್ಲೂ ವಿಶ್ವದಲ್ಲಿ ಅತೀ ಹೆಚ್ಚು ಇಮೇಲ್ ಪ್ಲಾಟ್‌ಫಾರ್ಮ್ ಆಗಿ ಜನ ಜಿಮೇಲ್ ಬಳಸುತ್ತಿದ್ದಾರೆ. ಬರೋಬ್ಬರಿ 1.5 ಬಿಲಿಯನ್ ಮಂದಿ ಸಕ್ರಿಯವಾಗಿ ಜಿಮೇಲ್ ಖಾತೆ ಬಳಸುತ್ತಿದ್ದಾರೆ. ಇದೀಗ ಜಿಮೇಲ್ ಮಹತ್ವದ ಕ್ರಮ ಕೈಗೊಂಡಿದೆ. ಸೆಪ್ಟೆಂಬರ್ 20ರ ಬಳಿಕ ಲಕ್ಷ ಲಕ್ಷ ಜಿಮೇಲ್ ಖಾತೆಯನ್ನು ಡಿಲೀಟ್ ಮಾಡಲು ಮುಂದಾಗಿದೆ. ಪ್ರಮುಖವಾಗಿ ಇನಾಕ್ಟೀವ್ ಆಗಿರುವ ಅಥವಾ ಸಕ್ರೀಯವಲ್ಲದ ಜಿಮೇಲ್ ಖಾತೆಗಳನ್ನು ಗೂಗಲ್ ಡಿಲೀಟ್ ಮಾಡುತ್ತಿದೆ.
ಕಳೆದ ಎರಡು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವರ್ಷಗಳಿಂದ ಸಕ್ರೀಯವಾಗಿರದಿದ್ದರೆ ಅಂತಹ ಜಿಮೇಲ್ ಖಾತೆಗಳನ್ನು ಗೂಗಲ್ ಡಿಲೀಟ್ ಮಾಡಲಿದೆ. ಕಳೆದ 2 ವರ್ಷದಿಂದ ಜಿಮೇಲ್ ಖಾತೆಯನ್ನು ತೆರೆದು ಇಮೇಲ್ ಸೆಂಡ್, ಅಥವಾ ಬಂದಿರುವ ಇಮೇಲ್‌ಗಳನ್ನು ರೀಡ್ ಮಾಡದಿದ್ದರೆ ಅಂತಹ ಖಾತೆಗಳನ್ನು ನಿಷ್ಕ್ರೀಯ ಎಂದು ಪರಿಗಣಿಸಿ ಗೂಗಲ್ ಡಿಲೀಟ್ ಮಾಡಲಿದೆ. ಸೆಪ್ಟೆಂಬರ್ 20 ರಿಂದ ಗೂಗಲ್ ಹಂತ ಹಂತವಾಗಿ ಸಕ್ರಿಯವಿಲ್ಲದ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡಲಿದೆ. ಗೂಗಲ್ ಲಿಸ್ಟ್ ಮಾಡಿರುವ ಖಾತೆಗಳಲ್ಲಿ ನಿಮ್ಮ ಖಾತೆ ಇದ್ದರೆ, ಉಳಿಸಿಕೊಳ್ಳಲು ಈ ವಿಧಾನ ಅನಸರಿಸಿದರೆ ನಿಮ್ಮ ಅಕೌಂಟ್ ಸೇಫ್ ಆಗಲಿದೆ.
ಸೆಂಡ್ ಅಥವಾ ರೀಡ್ ಇಮೇಲ್:
ನಿಮ್ಮ ಜಿಮೇಲ್ ಖಾತೆ ತೆರೆದು ಸುಮ್ಮನೆ ಇಮೇಲ್ ಕಳುಹಿಸಿ, ನೀವು ಬೇಕಾದರೆ ನಿಮಗೆ ಇಮೇಲ್ ಕಳುಹಿಸಿ ಅಥವಾ ಬೇರೆ ಇಮೇಲ್ ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಖಾತೆಯಲ್ಲಿನ ಚಟುವಟಿಕೆಯನ್ನು ಗೂಗಲ್ ಪರಿಗಣಿಸುತ್ತದೆ. ಅಥವಾ ಬಂದಿರುವ ಇಮೇಲ್‌ಗಳನ್ನು ರೀಡ್ ಮಾಡಿ. ಅನಗತ್ಯ ಇಮೇಲ್‌ಗಳನ್ನು ಡಿಲೀಟ್ ಮಾಡಿದರೂ ನಿಮ್ಮ ಖಾತೆ ಸಕ್ರೀಯವಾಗಿದೆ ಎಂದು ಗೂಗಲ್ ಪರಿಗಣಿಸುತ್ತದೆ.
ಶೇರ್ ಫೋಟೋ:
ಗೂಗಲ್ ಫೋಟೋದಿಂದ ನಿಮ್ಮ ನೆಚ್ಚಿನ ಫೋಟೋಗಳನ್ನು ನಿಮ್ಮ ಜಿಮೇಲ್ ಖಾತೆಯೊಂದಿಗೆ ಹಂಚಿಕೊಳ್ಳಿ ಇದರಿಂದಲೂ ನಿಮ್ಮ ಗೂಗಲ್ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸುತ್ತದೆ
ಯೂಟ್ಯೂಬ್ ಲಿಂಕ್:
ಯೂಟ್ಯೂಬ್ ವಿಡಿಯೋ ನೋಡಲು ನಿಮ್ಮ ಸಕ್ರಿಯವಲ್ಲದ ಜಿಮೇಲ್ ಖಾತೆಯನ್ನು ಲಿಂಕ್ ಮಾಡಿ. ಇದರಿಂದ ನೀವು ಪ್ರತಿ ಬಾರಿ ಯೂಟ್ಯೂಬ್ ವಿಡಿಯೋ ನೋಡಿದರೂ ಜಿಮೇಲ್ ಸಕ್ರಿಯವಾಗಲಿದೆ.
ನಿಮ್ಮ ಖಾತೆಯಲ್ಲಿ ಎನಾದರು ಚಟುವಟಿಕೆ ಮಾಡಿ, ಇದರಿಂದ ನಿಮ್ಮ ಖಾತೆ ಲಿಸ್ಟ್‌ನಲ್ಲಿ ಇದ್ದರೂ ಅದನ್ನು ಸಕ್ರೀಯ ಎಂದು ಲಿಸ್ಟ್‌ನಿಂದ ತೆಗೆದುಹಾಕುವುದು.ಬಹುತೇಕರು ಒಂದಕ್ಕಿಂತ ಹೆಚ್ಚು ಜಿಮೇಲ್ ಖಾತೆಗಳನ್ನು ಬಳಸುತ್ತಾರೆ. ಪ್ರಮುಖವಾಗಿ ಡ್ಯಾಕ್ಯುಮೆಂಟ್, ಫೋಟೋ, ವಿಡಿಯೋ ಸೇರಿದಂತೆ ಹಲವು ಮಾಹಿತಿಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗಾಗಿ ಈ ಖಾತೆಗಳನ್ನು ಗೂಗಲ್ ಡಿಲೀಟ್ ಮಾಡಿದರೆ ರೆಕವರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸೆಪ್ಟೆಂಬರ್ 20ರ ಒಳಗೆ ಖಾತೆಯನ್ನು ಸಕ್ರಿಯ ಮಾಡಿಕೊಂಡು ಗೂಗಲ್ ಡಿಲೀಟ್ ಶಿಕ್ಷೆಯಿಂದ ಪಾರಾಗಲು ಸಾಧ್ಯವಿದೆ