Ad

ನಕಲಿ ಮಧ್ಯ ಸೇವನೆ : ಸಾವಿನ ಸಂಖ್ಯೆ 48ಕ್ಕೆ ಏರಿಕೆ, ಮೂವರಿಗೆ ನ್ಯಾಯಾಂಗ ಬಂಧನ

ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಸಾವನಪ್ಪಿರುವ ಸಂಖ್ಯೆ 48ಕ್ಕೆ ಏರಿದೆ. ಕಲ್ಲಕುರಿಚಿಯ ಪ್ರಮುಖ ಭಾಗಗಳಲ್ಲಿಯೂ ಅಕ್ರಮ ಮದ್ಯದ ದಂಧೆ ನಡೆಯುತ್ತಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಚೆನ್ನೈ: ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಸಾವನಪ್ಪಿರುವ ಸಂಖ್ಯೆ 48ಕ್ಕೆ ಏರಿದೆ. ಕಲ್ಲಕುರಿಚಿಯ ಪ್ರಮುಖ ಭಾಗಗಳಲ್ಲಿಯೂ ಅಕ್ರಮ ಮದ್ಯದ ದಂಧೆ ನಡೆಯುತ್ತಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಈ ಅನಾಹುತದ ಹಿನ್ನೆಲೆಯಲ್ಲಿ ಕಲ್ಲಕುರಿಚಿಯ ಹಿಂದಿನ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾತಾವತ್ ಅಮಾನತುಗೊಂಡಿದ್ದು, ಅವರ ನಂತರ ಹೊಸದಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಎಂ.ಎಸ್. ಪ್ರಶಾಂತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

Ad
300x250 2

ನಕಲಿ ಮದ್ಯ ಸೇವನೆಯಿಂದ 165 ವ್ಯಕ್ತಿಗಳನ್ನು ಕಲ್ಲಕುರಿಚಿ, ಜಿಪ್ಮರ್, ಸೇಲಂ ಮತ್ತು ಮುಂಡಿಯಂಬಕ್ಕಂನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಈಗಾಗಲೇ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಸುಮಾರು 30 ವ್ಯಕ್ತಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಆದರೆ, 119 ಜನರು ಇನ್ನೂ ತೀವ್ರವಾಗಿ ಹೋರಾಡುತ್ತಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

Ad
Ad
Nk Channel Final 21 09 2023
Ad