ಮುಂಬೈ: 2017ರಲ್ಲಿ ತನ್ನ ತಾಯಿಯನ್ನು ಕೊಂದು ಆಕೆಯ ದೇಹದ ಕೆಲವು ಭಾಗಗಳನ್ನು ತಿಂದ ಆರೋಪದಲ್ಲಿ ಸುನೀಲ್ ಕುಚ್ಕೊರವಿ ಎಂಬ ವ್ಯಕ್ತಿಗೆ ಕೊಲ್ಹಾಪುರ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮರಣದಂಡನೆಯನ್ನು ದೃಢಪಡಿಸಿತು, ಈ ಪ್ರಕರಣವು ‘ಅಪರೂಪದ ಅಪರೂಪದ’ ಅಡಿಯಲ್ಲಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.
ಅಪರಾಧಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದಲ್ಲದೆ ಆಕೆಯ ದೇಹದ ಭಾಗಗಳಾದ ಮೆದುಳು, ಹೃದಯ, ಯಕೃತ್ತು, ಮೂತ್ರಪಿಂಡ, ಕರುಳುಗಳನ್ನು ತೆಗೆದು ಬಾಣಲೆಯಲ್ಲಿ ಬೇಯಿಸುತ್ತಿದ್ದ ಎಂದು ಹೈಕೋರ್ಟ್ ಹೇಳಿದೆ. ಇದು ನರಭಕ್ಷಕತೆಯ ಪ್ರಕರಣವಾಗಿದೆ ಎಂದು ಪೀಠವು ಗಮನಿಸಿದೆ.
Ad