Bengaluru 30°C

ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 90 ಕ್ಷೇತ್ರಗಳಿಗೆ 3 ಹಂತಗಳಲ್ಲಿ ಮತದಾನವನ್ನು ನಡೆಸುತ್ತಿರುವುದಾಗಿ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗದಿಂದ ಘೋಷಣೆ ಮಾಡಲಾಗಿದೆ.

ನವದೆಹಲಿ: ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 90 ಕ್ಷೇತ್ರಗಳಿಗೆ 3 ಹಂತಗಳಲ್ಲಿ ಮತದಾನವನ್ನು ನಡೆಸುತ್ತಿರುವುದಾಗಿ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗದಿಂದ ಘೋಷಣೆ ಮಾಡಲಾಗಿದೆ.


ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ. ಅಕ್ಟೋಬರ್.4ರಂದು ಮತ ಎಣಿಕೆ ನಡೆದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.


ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ 74 ಸಾಮಾನ್ಯ, ಎಸ್ಸಿ -7 ಮತ್ತು ಎಸ್ಟಿ -9 ಆಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 87.09 ಲಕ್ಷ ಮತದಾರರಿದ್ದು, ಅವರಲ್ಲಿ 44.46 ಲಕ್ಷ ಪುರುಷರು,


42.62 ಲಕ್ಷ ಮಹಿಳೆಯರು, 3.71 ಲಕ್ಷ ಮೊದಲ ಬಾರಿಗೆ ಮತದಾರರು ಮತ್ತು 20.7 ಲಕ್ಷ ಯುವ ಮತದಾರರು ಇದ್ದಾರೆ. ಅಮರನಾಥ ಯಾತ್ರೆ ಆಗಸ್ಟ್ 19 ರಂದು ಕೊನೆಗೊಳ್ಳಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಆಗಸ್ಟ್ 20 ರಂದು ಪ್ರಕಟಿಸಲಾಗುವುದು ಎಂದರು.


Nk Channel Final 21 09 2023