Bengaluru 22°C
Ad

ಕಾನ್ಪುರದಲ್ಲಿ ರೈಲು ಉರುಳಿಸಲು ಸಂಚು : ಹಳಿಯಲ್ಲಿ ಸಿಲಿಂಡರ್​ ಪತ್ತೆ

ಕಾನ್ಪುರದಲ್ಲಿ ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದಿದೆ. ಕಾನ್ಪುರದಿಂದ ಫತೇಪುರ್‌ಗೆ ಬರುತ್ತಿದ್ದ ದೆಹಲಿ ಹೌರಾ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು. ಕಾನ್ಪುರದ ಪ್ರೇಂಪುರ ರೈಲು ನಿಲ್ದಾಣದ ಬಳಿ ಲೂಪ್ ಲೈನ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಇರಿಸಲಾಗಿತ್ತು. ಬೆಳಗ್ಗೆ 5.50ಕ್ಕೆ ಈ ಘಟನೆ ನಡೆದಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸಿದ್ದರು.

ಉತ್ತರ ಪ್ರದೇಶ:  ಕಾನ್ಪುರದಲ್ಲಿ ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದಿದೆ. ಕಾನ್ಪುರದಿಂದ ಫತೇಪುರ್‌ಗೆ ಬರುತ್ತಿದ್ದ ದೆಹಲಿ ಹೌರಾ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಇರಿಸಲಾಗಿತ್ತು. ಕಾನ್ಪುರದ ಪ್ರೇಂಪುರ ರೈಲು ನಿಲ್ದಾಣದ ಬಳಿ ಲೂಪ್ ಲೈನ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಇರಿಸಲಾಗಿತ್ತು. ಬೆಳಗ್ಗೆ 5.50ಕ್ಕೆ ಈ ಘಟನೆ ನಡೆದಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸಿದ್ದರು.

ರೈಲಿನಲ್ಲಿದ್ದ ರೈಲ್ವೆ ನೌಕರರು ಆರ್‌ಪಿಎಫ್ ಮತ್ತು ಇತರ ಇಲಾಖೆಯ ಜನರಿಗೆ ಮಾಹಿತಿ ನೀಡಿದರು. ರೈಲ್ವೆ ಹಳಿಯಲ್ಲಿ ಖಾಲಿ 5 ಕೆಜಿ ಸಿಲಿಂಡರ್ ಅನ್ನು ಇಡಲಾಗಿದೆ. ಪೈಲಟ್ ಮತ್ತು ಸಹಾಯಕ ಪೈಲಟ್ ಎಚ್ಚರಿಕೆಯಿಂದಾಗಿ ರೈಲನ್ನು ಉರುಳಿಸುವ ಸಂಚು ವಿಫಲವಾಗಿದೆ. ಈ ಘಟನೆ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಕುರಿತು ಉತ್ತರ ಮಧ್ಯ ರೈಲ್ವೆ ವಲಯದ ಪ್ರಯಾಗ್‌ರಾಜ್ ವಿಭಾಗದ ಪಿಆರ್‌ಒ ಅಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

Ad
Ad
Nk Channel Final 21 09 2023