Bengaluru 23°C
Ad

ರೀಮಲ್ ಚಂಡಮಾರುತ; ಮಣಿಪುರ ಪ್ರವಾಹ, 1.8 ಲಕ್ಷ ಮಂದಿ ಸಂಕಷ್ಟದಲ್ಲಿ !

Maanipur

ಇಂಫಾಲ: ರೀಮಲ್ ಚಂಡಮಾರುತದ ಪರಿಣಾಮ ಮಣಿಪುರದಲ್ಲಿ ಸುರಿದ ಭಾರಿ ಮಳೆ ಸೃಜಿಸಿದ ಪ್ರವಾಹದಿಂದ 1,88,143 ಮಂದಿ ತೊಂದರೆಗೀಡಾಗಿದ್ದಾರೆ ಎಂದು ಸಚಿವರೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ.

ಕನಿಷ್ಠ 24,265 ಮನೆಗಳು ಹಾನಿಯಾಗಿವೆ. 18,103 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 56 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸುಮಾರು 401 ಹೆಕ್ಟೆರ್‌ಗಳಷ್ಟು ಕೃಷಿ ಹಾನಿಯಾಗಿದೆ. ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ಬಿಷ್ಣುಪುರ, ನೋನಿ, ಚುರ್‌ಚಂದಾಪುರ, ಸೇನಾಪತಿ ಹಾಗೂ ಕಾಕ್‌ಚಿಂಗ್‌ ಜಿಲ್ಲೆಯಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಹಾಗೆಯೇ ಪ್ರವಾಹದಲ್ಲಿ ಮೂರು ಮಂದಿ ಸಾವಿಗೀಡಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಒಬ್ಬರು ಕಾಣೆಯಾಗಿದ್ದಾರೆ ಎಂದು ನೀರಾವರಿ ಮತ್ತು ಪರಿಹಾರ ಹಾಗೂ ವಿಪತ್ತು ನಿರ್ವಹಣಾ ಸಚಿವ ಅವಾಂಗ್ಬೌ ನ್ಯೂಮೈ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad