Ad

ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ

ಕೇರಳದ ವಯನಾಡು  ಇದೀಗ ಮಸಣದಂತಾಗಿದೆ. ಎಲ್ಲೆಂದರಲ್ಲಿ ಹೆಣಗಳ ರಾಶಿ , ಕೊಚ್ಚಿ ಹೋಗಿರುವ ಮನೆಗಳು.  ಭೀಕರ ಭೂಕುಸಿತದಿಂದಾಗಿ ಇಡೀ ದೇಶವೆ ಬೆಚ್ಚಿಬಿದ್ದಿದೆ. ಇದುವರೆಗೂ ಈ ದುರಂತದಲ್ಲಿ 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ 300 ಜನ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ, “ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ” ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಕೇರಳ : ಕೇರಳದ ವಯನಾಡು  ಇದೀಗ ಮಸಣದಂತಾಗಿದೆ. ಎಲ್ಲೆಂದರಲ್ಲಿ ಹೆಣಗಳ ರಾಶಿ , ಕೊಚ್ಚಿ ಹೋಗಿರುವ ಮನೆಗಳು.  ಭೀಕರ ಭೂಕುಸಿತದಿಂದಾಗಿ ಇಡೀ ದೇಶವೆ ಬೆಚ್ಚಿಬಿದ್ದಿದೆ. ಇದುವರೆಗೂ ಈ ದುರಂತದಲ್ಲಿ 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ 300 ಜನ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ, “ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ” ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನದ ಬಿಜೆಪಿ ನಾಯಕ, ಮಾಜಿ ಶಾಸಕ ಜ್ಞಾನದೇವ್‌ ಅಹುಜಾ ಹೇಳಿಕೆ ಚರ್ಚೆಗೆ ಕಾರಣವಾಗಿದೆ.“ವಯನಾಡಿನಲ್ಲಿ ಭೂಕಂಪ ಸಂಭವಿಸಿರುವುದು ಗೋಹತ್ಯೆಯ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯನ್ನು ನಿಲ್ಲಿಸದಿದ್ದದರೆ ಇಂತಹ ಹಲವು ದುರಂತಗಳು ಸಂಭವಿಸುತ್ತಲೇ ಇರುತ್ತವೆ. 2018ರಿಂದಲೂ ನಾನು ಇದನ್ನು ಗಮನಿಸುತ್ತಿದ್ದೇನೆ. ಎಲ್ಲೆಲ್ಲಿ ಗೋವುಗಳ ಹತ್ಯೆಯು ಜಾಸ್ತಿಯಾಗಿರುತ್ತದೆಯೋ, ಅಲ್ಲೆಲ್ಲ ಭೂಕುಸಿತ ಸಂಭವಿಸುತ್ತಿರುತ್ತವೆ. ಕೇರಳದ ವಯನಾಡು ಇದಕ್ಕೆ ನಿದರ್ಶನ”ಎಂದು ಮಾಧ್ಯಮದೊಂದಿಗರ ಮಾತನಾಡುವಾಗ ಹೇಳಿದ್ದಾರೆ.

Ad
Ad
Nk Channel Final 21 09 2023