Bengaluru 27°C
Ad

ಲೋಕಸಭಾ ಚುನಾವಣೆ; ಇಡೀ ವಿಶ್ವವೇ ಕಾಯುತ್ತಿರೋ ರಿಸಲ್ಟ್‌ಗೆ ಕೌಂಟ್​ಡೌನ್

Modi

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಇಡೀ ವಿಶ್ವದ ಕುತೂಹಲ, ಪ್ರಜಾಪ್ರಭುತ್ವದ ಅತಿದೊಡ್ಡ ಮತಯುದ್ಧಕ್ಕೆ ಇನ್ನು ಕೆಲವೇ ಗಂಟೆಯಲ್ಲಿ ಉತ್ತರ ಸಿಗಲಿದೆ. ದೇಶಾದ್ಯಂತ ಲೋಕಸಭಾ ಚುನಾವಣೆಯ ಮತಎಣಿಕೆಗೆ ಕೊನೇ ಹಂತದ ತಯಾರಿಗಳು ನಡೆಯುತ್ತಿದೆ.

ದೇಶಾದ್ಯಂತ ಮತಎಣಿಕೆಗೆ ಚುನಾವಣಾ ಆಯೋಗ ಸಜ್ಜಾಗಿದ್ದು, ಇವತ್ತು ಸಂಜೆಯೊಳಗೆ 543 ಲೋಕಸಭಾ ಕ್ಷೇತ್ರಗಳ ಭವಿಷ್ಯ ಹೊರ ಬೀಳಲಿದೆ. ಈ ಬಾರಿ ಒಟ್ಟು 7 ಹಂತಗಳಲ್ಲಿ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆದಿತ್ತು. ಈಗಾಗಲೇ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎಗೆ ಭರ್ಜರಿ ಬಹುಮತ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಎಕ್ಸಿಟ್ ಪೋಲ್ ವರದಿಯೇ ಚುನಾವಣಾ ಫಲಿತಾಂಶದಲ್ಲೂ ಪ್ರತಿಫಲಿಸುತ್ತಾ ಅನ್ನೋದು ಕುತೂಹಲದ ಕೇಂದ್ರ ಬಿಂದುವಾಗಿದೆ.

ಈ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿಗಳ ಮೂಲಕವೇ ಕಾಂಗ್ರೆಸ್ ಪಕ್ಷ ಮತಯಾಚನೆ ಮಾಡಿತ್ತು. ಪ್ರಮಖವಾಗಿ ಇಂಡಿಯಾ ಒಕ್ಕೂಟ ಗೆದ್ದರೆ ಖಾತೆಗೆ ₹8500 ಹಣ ಟಕಾ ಟಕ್ ಅಂತ ಜಮೆ ಆಗುತ್ತೆ ಎಂದು ರಾಹುಲ್ ಗಾಂಧಿ ಹೇಳಿದ್ದರು.  ಕಾಂಗ್ರೆಸ್​ ಗ್ಯಾರಂಟಿಗೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೌಂಟರ್ ಕೊಟ್ಟಿದ್ದರು. ನಾನೇ ಗ್ಯಾರಂಟಿ ಅಂತಾ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದ್ದರು.

Ad
Ad
Nk Channel Final 21 09 2023
Ad