Ad

ನಿರ್ಮಲಾ ಸೀತಾರಾಮನ್ ಕುರಿತ ಡೀಪ್‍ಫೇಕ್ ವಿಡಿಯೋ ವೈರಲ್: ಎಫ್‍ಐಆರ್ ದಾಖಲು

Dfake

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ವಿಡಂಬನಾತ್ಮಕ ಡೀಪ್ ಫೇಕ್ ವೀಡಿಯೊ ಶೇರ್ ಮಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಗುಜರಾತ್ ಗೃಹಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆ.

Ad
300x250 2

ಡೀಪ್‍ಫೇಕ್ ಎನ್ನುವುದು ಕೃತಕ ಬುದ್ಧಿಮತ್ತೆ (AI) ಸಾಫ್ಟ್ ವೇರ್ ಬಳಸಿಕೊಂಡು ವಿಡಿಯೊವನ್ನು ಮತ್ತು ವಿಡಿಯೊ ಅಂಶಗಳನ್ನು ವಿರೂಪಗೊಳಿಸುವ ಒಂದು ತಂತ್ರವಾಗಿದೆ. ಈ ಮೂಲಕ ಜನ ಎಂದೂ ಆಡದೇ ಇರುವ ಮಾತನ್ನು ನಾವು ಆಡಿದಂತೆ ಬಿಂಬಿಸಬಹುದಾಗಿದೆ. ಈ ವಿಡಿಯೊ ಅಂಶಗಳನ್ನು ವಾಸ್ತವ ಎನ್ನುವಂತೆ ಬಿಂಬಿಸಬಹುದಾಗಿದ್ದು, ಸಾಮಾನ್ಯವಾಗಿ ಕೆಟ್ಟ ಉದ್ದೇಶದಿಂದ ಇದನ್ನು ಬಳಸಲಾಗುತ್ತದೆ.

ಎಕ್ಸ್ ವೇದಿಕೆಯಲ್ಲಿ ಈ ವಿಡಿಯೊ ಪೋಸ್ಟ್ ಮಾಡಿದ ಆರೋಪದಲ್ಲಿ ಚಿರಾಗ್ ಪಟೇಲ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Ad
Ad
Nk Channel Final 21 09 2023
Ad