Bengaluru 23°C
Ad

ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಶಿಲ್ಪಿ ಜಗದೀಪ್ ಆಪ್ಟೆ ಬಂಧನ

ಮಾಲ್ವಾನ್‌ನಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಇತ್ತೀಚೆಗೆ ಕುಸಿದು ಬಿದ್ದ ಘಟನೆಗೆ ಸಂಬಂಧಪಟ್ಟಂತೆ, ತನಿಖೆ ಚುರುಕುಗೊಂಡಿದ್ದು, ಈಗ ಈ ಪ್ರಕರಣದಲ್ಲಿ ಎರಡನೇ ಬಂಧನವಾಗಿದೆ.

ಮಹಾರಾಷ್ಟ್ರ: ಮಾಲ್ವಾನ್‌ನಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಇತ್ತೀಚೆಗೆ ಕುಸಿದು ಬಿದ್ದ ಘಟನೆಗೆ ಸಂಬಂಧಪಟ್ಟಂತೆ, ತನಿಖೆ ಚುರುಕುಗೊಂಡಿದ್ದು, ಈಗ ಈ ಪ್ರಕರಣದಲ್ಲಿ ಎರಡನೇ ಬಂಧನವಾಗಿದೆ. ಈ ಘಟನೆಯ ನಂತರ ತಲೆಮರೆಸಿಕೊಂಡಿದ್ದ ಶಿಲ್ಪಿ ಜಗದೀಪ್ ಆಪ್ಟೆಯನ್ನ ಪೊಲೀಸರು  ಬಂಧಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ, ಈ ಪ್ರತಿಮೆಯ ವಿನ್ಯಾಸ ಸಲಹೆಗಾರ ಚೇತನ್ ನನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆ ನಂತರ ಎರಡು ವಾರಗಳ ಹುಡುಕಾಟದ ಬಳಿಕ ಇದೀಗ ಶಿಲ್ಪಿ ಜಗದೀಪ್ ಆಪ್ಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳೆದ ವರ್ಷ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ 35 ಅಡಿ ಎತ್ತರದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು. ಈ ಪ್ರತಿಮೆ ಆಗಸ್ಟ್ 26ರ ಸೋಮವಾರದಂದು ಕುಸಿದುಬಿದ್ದಿತ್ತು.

Ad
Ad
Nk Channel Final 21 09 2023