Bengaluru 23°C
Ad

ಜೂನ್ 12ರಂದ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ-ಭಾರತೀಯ ಜನತಾ ಪಕ್ಷ ಮೂಲಕ ಭರ್ಜರಿ ಗೆಲವು ಸಾಧಿಸಿರುವ ನಾರಾ ಚಂದ್ರಬಾಬು ನಾಯ್ಡು ಅವರು ಬುಧವಾರ ಜೂನ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನವದೆಹಲಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ-ಭಾರತೀಯ ಜನತಾ ಪಕ್ಷ ಮೂಲಕ ಭರ್ಜರಿ ಗೆಲವು ಸಾಧಿಸಿರುವ ನಾರಾ ಚಂದ್ರಬಾಬು ನಾಯ್ಡು ಅವರು ಬುಧವಾರ ಜೂನ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

“ಬಿಜೆಪಿ, ಜನಸೇನಾ ಮತ್ತು ಟಿಡಿಪಿಯ ಎಲ್ಲಾ ಶಾಸಕರು ನಾನು ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರದ ಮುಂಬರುವ ಮುಖ್ಯಮಂತ್ರಿಯಾಗಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ” ಎಂದು ಎನ್‌ಡಿಎ ಶಾಸಕರ ಸಭೆಯ ನಂತರ ನಾಯ್ಡು ಹೇಳಿದ್ದಾರೆ. 2014 ರಲ್ಲಿ, ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ 2019 ರವರೆಗೆ ಸೇವೆ ಸಲ್ಲಿಸಿದರು. ಇದೀಗ ಮತ್ತೊಮ್ಮೆ ಸೇವೆಯನ್ನು ಮುಂದುವರೆಸಲು ಸಿದ್ದರಾಗಿದ್ದಾರೆ.

Ad
Ad
Nk Channel Final 21 09 2023
Ad