Bengaluru 23°C
Ad

ಕೆಬಿಸಿ16 ಗೆದ್ದು ಕೋಟ್ಯಧಿಪತಿಯಾದ ಚಂದರ್, ಕೊನೆ ಪ್ರಶ್ನೆ ಏನಾಗಿತ್ತು ಗೊತ್ತಾ ?

1 Crore

ಮುಂಬೈ:  ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ ಭಾರತದ ಅತ್ಯಂತ ಜನಪ್ರಿಯ ಕಿರುತೆರೆ ಶೋಗಳಲ್ಲಿ ಒಂದು. 2000 ರ ಜುಲೈ ನಲ್ಲಿ ಪ್ರಾರಂಭವಾದ ಈ ಶೋ ಈವರೆಗೆ ನಡೆದುಕೊಂಡು ಬರುತ್ತಿದೆ. ಇದೀಗ ಕೆಬಿಸಿ 16ನೇ ಸೀಸನ್ ನಡೆಯುತ್ತಿದ್ದು, ಆಗಸ್ಟ್ 12 ರಂದು ಆರಂಭವಾದ ಈ ಶೋನಲ್ಲಿ ಇದೀಗ ಮೊದಲ ಕೋಟ್ಯಧಿಪತಿ ಆಗಿದ್ದಾರೆ ಜಮ್ಮು ಕಾಶ್ಮೀರದ ಚಂದೇರ್ ಪ್ರಕಾಶ್.

ಒಂದು ಕೋಟಿಗೆ ಅಮಿತಾಬ್ ಬಚ್ಚನ್ ಕಠಿಣವಾದ ಪ್ರಶ್ನೆಯನ್ನೇ ಚಂದೇರ್​ಗೆ ಕೇಳಿದ್ದರು. ‘ಒಂದು ದೇಶದ ದೊಡ್ಡ ನಗರ ಇದು, ಆದರೆ ಈ ನಗರ ಆ ದೇಶದ ರಾಜಧಾನಿ ಅಲ್ಲ, ಆದರೆ ಇದರ ಬಂದರಿಗೆ ಉರ್ದು ಹೆಸರಿದೆ, ಆ ಹೆಸರಿನ ಅರ್ಥ ಶಾಂತಿಯ ನಿರ್ಮಾಣ ಎಂದಾಗಿದೆ. ಯಾವುದು ಆ ನಗರ’ ಎಂಬುದು ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯಾಗಿತ್ತು. ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ಸಹ ಬಚ್ಚನ್ ನೀಡಿದ್ದರು. ಓಮನ್, ಸೊಮಾಲಿಯಾ, ತಂಜಾನಿಯಾ ಮತ್ತು ಬ್ರೂನೈ. ಈ ಪ್ರಶ್ನೆಗೆ ಡಬಲ್ ಫ್ಲಿಪ್ಪರ್ ಲೈಫ್​ ಲೈನ್ ಆಯ್ಕೆ ಆರಿಸಿದ ಚಂದೇರ್ ಮೊದಲು ನೀಡಿದ ಉತ್ತರವೇ ಸರಿಯಾಗಿತ್ತು. ಚಂದೇರ್ ‘ತಂಜಾನಿಯಾ’ ಅನ್ನು ಆರಿಸಿದರು ಅದೇ ಸರಿ ಉತ್ತರ ಆಗಿತ್ತು.

ಅಮಿತಾಬ್ ಬಚ್ಚನ್, ‘ಒಂದು ಕೋಟಿ’ ಎಂದು ಜೋರಾಗಿ ಕೂಗುತ್ತಾ ಸಂಭ್ರಮಿಸಿದರು. ಆದರೆ ಚಂದೇರ್ ಶಾಂತ ಚಿತ್ತವಾಗಿಯೇ ಇದ್ದರು. ಕೋಟಿ ಗೆದ್ದೊಡನೆ ಅಮಿತಾಬ್ ಬಚ್ಚನ್​ ಕಾಲಿಗೆ ನಮಸ್ಕರಿಸಿದರು. ಬಚ್ಚನ್ ಚಂದೇರ್ ಅವರನ್ನು ಆಲಂಗಿಸಿಕೊಟ್ಟರು. ಬಳಿಕ ಅವರಿಗೆ ಒಂದು ಕೋಟಿ ರೂಪಾಯಿಯ ಚೆಕ್ ಕೊಟ್ಟರು. ನಂತರ ಹುಂಡೈನ ವೆನ್ಯು ಕಾರನ್ನು ಸಹ ನೀಡಿದರು. ಬಳಿಕ ಏಳು ಕೋಟಿ ಪ್ರಶ್ನೆಯನ್ನು ಕೇಳಲಾಗಿದೆ. ವಿಶೇಷವೆಂದರೆ ಅದಕ್ಕೂ ಚಂದೇರ್​ಗೆ ಉತ್ತರ ಗೊತ್ತಿತ್ತು, ಆದರೆ ಅವರು ಆಟದಿಂದ ನಿವೃತ್ತಿ ಹೊಂದಿ 1 ಕೋಟಿಯನ್ನಷ್ಟೆ ಸ್ವೀಕರಿಸಿದರು.

Ad
Ad
Nk Channel Final 21 09 2023