Bengaluru 22°C
Ad

ಮನ್‌ ಕೀ ಬಾತ್‌ಗೆ ದಶಕದ ಸಂಭ್ರಮ : ಪ್ರಧಾನಿ ಮೋದಿ ಭಾವುಕ ಮಾತು

 ಸಮಾಜದ ವಿವಿಧ ವಿಷಯಗಳ ಬಗ್ಗೆ ಜನರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮತ್ತು ಜನರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ್ದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ಗೆ ಇದೀಗ ದಶಕದ ಸಂಭ್ರಮ.

ನವದೆಹಲಿ: ಸಮಾಜದ ವಿವಿಧ ವಿಷಯಗಳ ಬಗ್ಗೆ ಜನರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮತ್ತು ಜನರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ್ದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ಗೆ ಇದೀಗ ದಶಕದ ಸಂಭ್ರಮ.

2014ರಲ್ಲಿ ಪ್ರಧಾನಿ ಮೋದಿ ಕೇಂದ್ರದಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ವೇಳೆ ವಿಜಯದಶಮಿ ಅಂಗವಾಗಿ ಅ.3ರಂದು ಮೊದಲ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದರು. ಇನ್ನೊಂದು ವಾರದಲ್ಲಿ (ಅ.3) ಮೊದಲ ಕಾರ್ಯಕ್ರಮಕ್ಕೆ 10 ವರ್ಷ ತುಂಬಲಿದೆ. ಇದುವರೆಗೂ ಒಟ್ಟು 114 ಕಾರ್ಯಕ್ರಮಗಳು ಪ್ರಸಾರವಾಗಿವೆ.
ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಸಾರವಾದ ಸೆಪ್ಟೆಂಬರ್‌ ಮಾಸಿಕದ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನಕರಾತ್ಮಕ ಸಂಭಾಷಣೆಗಳು ಮಾತ್ರ ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಮನ್‌ ಕೀ ಬಾತ್‌ ಸುಳ್ಳು ಮಾಡಿದೆ. ಈ ಸಂಚಿಕೆ ನನ್ನನ್ನು ಭಾವುಕವಾಗಿಸಿದೆ. ಹಳೆಯ ನೆನಪುಗಳ ಮಹಾಪೂರವೇ ಹರಿದು ಬರುತ್ತಿದೆ. ಮನ್‌ ಕೀ ಬಾತ್‌ 10 ವರ್ಷಗಳನ್ನು ಪೂರೈಸಿದೆ’ ಎಂದಿದ್ದಾರೆ.
Ad
Ad
Nk Channel Final 21 09 2023