Bengaluru 22°C
Ad

ಲಂಚ ಪಡೆಯುವಾಗಲೇ ಇಬ್ಬರು ಸಿಬಿಐ ಬಲೆಗೆ: 2.39 ಕೋಟಿ ನಗದು ವಶಕ್ಕೆ

ಸಿಬಿಐ ಅಧಿಕಾರಿಗಳು ಇಂದು ಭರ್ಜರಿ ಬೇಟೆಯಾಡಿದ್ದು, ಕೋಟಿ-ಕೋಟಿ ರೂಪಾಯಿ ಲಂಚ ಪಡೆಯುವಾಗಲೇ ಇಬ್ಬರು ಬಲೆಗೆ ಬಿದ್ದಿದ್ದಾರೆ.

ನವದೆಹಲಿ :ಸಿಬಿಐ ಅಧಿಕಾರಿಗಳು ಇಂದು ಭರ್ಜರಿ ಬೇಟೆಯಾಡಿದ್ದು, ಕೋಟಿ-ಕೋಟಿ ರೂಪಾಯಿ ಲಂಚ ಪಡೆಯುವಾಗಲೇ ಇಬ್ಬರು ಬಲೆಗೆ ಬಿದ್ದಿದ್ದಾರೆ.

ದೆಹಲಿಯ ಮಾಲಿನ್ಯ ನಿಯಂತ್ರಣ ಸಮಿತಿಯ ಹಿರಿಯ ಪರಿಸರ ಎಂಜಿನಿಯರ್ ಮತ್ತು ಮಧ್ಯವರ್ತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೇಂದ್ರ ತನಿಖಾ ದಳ ಅರೆಸ್ಟ್​ ಮಾಡಿದೆ.

ಶೋಧದ ವೇಳೆ ಹಿರಿಯ ಪರಿಸರ ಇಂಜಿನಿಯರ್ ಅವರ ಕಚೇರಿ ಆವರಣದಿಂದ ಅಂದಾಜು 2.39 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. 50 ರಿಂದ 500 ರೂಪಾಯಿವರೆಗಿನ ಮುಖ ಬೆಲೆಯ ಕಂತೆ-ಕಂತೆ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಯಾವ ಕಾರಣಕ್ಕೆ ಲಂಚ ಪಡೆಯಲಾಗುತ್ತಿತ್ತು ಎಂಬಿತ್ಯಾದಿ ಮಾಹಿತಿಯು ಸದ್ಯ ತನಿಖೆಯಿಂದ ತಿಳಿದುಬರಬೇಕಿದೆ.

Ad
Ad
Nk Channel Final 21 09 2023