Bengaluru 24°C

ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು :  ಓರ್ವ ವಿದ್ಯಾರ್ಥಿ ಮೃತ್ಯು

ಕಾರು ನಿಯಂತ್ರಣ  ತಪ್ಪಿ ಮಗುಚಿ ಬಿದ್ದ ಪರಿಣಾಮ  ಓರ್ವ ವಿದ್ಯಾರ್ಥಿ ಮೃತಪಟ್ಟು , ಮೂವರು ಗಾಯಗೊಂಡ  ದಾರುಣ ಘಟನೆ  ಶನಿವಾರ ಮಧ್ಯಾಹ್ನ ರಾಣಿಪುರ ಸಮೀಪದ  ಪೆರುತ್ತಡಿ  ಎಂಬಲ್ಲಿ ನಡೆದಿದೆ .ಸುರತ್ಕಲ್ ಎನ್  ಐ ಟಿ ಕೆ  ಯ ವಿದ್ಯಾರ್ಥಿ  ರಾಯಚೂರು  ನಿವಾಸಿ  ಆರೀ ಬುದ್ದಿನ್ (  ೨೧) ಮೃತಪಟ್ಟವನು . ಗಾಯಗೊಂಡವರನ್ನು ಪೂಡಂಕಲ್ ನ  ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು :   ಕಾರು ನಿಯಂತ್ರಣ  ತಪ್ಪಿ ಮಗುಚಿ ಬಿದ್ದ ಪರಿಣಾಮ  ಓರ್ವ ವಿದ್ಯಾರ್ಥಿ ಮೃತಪಟ್ಟು , ಮೂವರು ಗಾಯಗೊಂಡ  ದಾರುಣ ಘಟನೆ  ಶನಿವಾರ ಮಧ್ಯಾಹ್ನ ರಾಣಿಪುರ ಸಮೀಪದ  ಪೆರುತ್ತಡಿ  ಎಂಬಲ್ಲಿ ನಡೆದಿದೆ .ಸುರತ್ಕಲ್ ಎನ್  ಐ ಟಿ ಕೆ  ಯ ವಿದ್ಯಾರ್ಥಿ  ರಾಯಚೂರು  ನಿವಾಸಿ  ಆರೀ ಬುದ್ದಿನ್ (  ೨೧) ಮೃತಪಟ್ಟವನು . ಗಾಯಗೊಂಡವರನ್ನು ಪೂಡಂಕಲ್ ನ  ಆಸ್ಪತ್ರೆಗೆ ದಾಖಲಿಸಲಾಗಿದೆ.


ಆಲ್ಟೋ ಕಾರಿನಲ್ಲಿ ನಾಲ್ವರು  ಇಂಜಿನಿಯರಿಂಗ್ ವಿದ್ಯಾರ್ಥಿಗಳು  ಪ್ರವಾಸಿ ಕೇಂದ್ರವಾದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.   ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು  ಧರೆಗೆ ಬಡಿದಿದೆ. ಸಿಲುಕಿದ್ದ  ಅರೀಬುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಾಗರಿಕರು ಹಾಗೂ ರಾಜಾಪುರ  ಠಾಣಾ ಪೊಲೀಸರು ಅಪಘಾತಕ್ಕೀಡಾದ ಕಾರಿನಲ್ಲಿ ಸಿಲುಕಿದ್ದ ಅರಿಬುದ್ದೀನ್ ನನ್ನು ಹೊರತೆಗೆದರು . ಮೃತ ದೇಹವನ್ನು ಕಾಸರಗೋಡು ಜಿಲ್ಲಾಸ್ಪತ್ರೆಯ ಶವಗಾ ರದಲ್ಲಿರಿಸಲಾಗಿದೆ. ಮನೆಯವರಿಗೆ ಮಾಹಿತಿ ನೀಡಲಾಗಿದ್ದು ರಾತ್ರಿ ವೇಳೆ ಕಾ ಞ೦ ಗಾಡ್ ಗೆ ತಲಪುವ ಸಾಧ್ಯತೆ ಇದೆ.


Nk Channel Final 21 09 2023