Bengaluru 24°C
Ad

ಕಾಲುವೆಗೆ ಉರುಳಿ ಬಿದ್ದ ಕಾರು: ಒಂದೇ ಕುಟುಂಬದ 6 ಜನ ಮೃತ್ಯು

ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಬಳಿ ನಡೆದಿದೆ.

ಮಹಾರಾಷ್ಟ್ರ: ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಬಳಿ ನಡೆದಿದೆ.

ಮಧ್ಯರಾತ್ರಿ 12;30 ವೇಳೆಗೆ ಆಲ್ಟೋ ಕಾರು ಚಿಂಚಣಿ ಪ್ರದೇಶದಲ್ಲಿರುವ ಟಕಾರಿ ನಾಲೆಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಸಿವಿಲ್​ ಇಂಜಿನಿಯರ್​ ಜಗನ್ನಾಥ್​ ಪಾಟೀಲ್​​ (60) ಪತ್ನಿ ಸುಜಾತ ಪಾಟೀಲ್​ (55) ಪುತ್ರಿ ಪ್ರಿಯಾಂಕಾ ಖರಾಡೆ (30), ಮೊಮ್ಮಗಳು ಧ್ರುವ (3), ರಾಜೀವಿ(2) ಮತ್ತು ಕಾರ್ತಿಕಿ (1) ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುತ್ರಿ ಸ್ವಪ್ನಲಿ(30) ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad