Bengaluru 22°C
Ad

ಗೂಗಲ್ ಮ್ಯಾಪ್ ನಂಬಿ ನದಿಗೆ ಬಿದ್ದ ಕಾರು: ಮೂವರು ಮೃತ್ಯು

ಗೂಗಲ್ ಮ್ಯಾಪ್ ನ್ಯಾವಿಗೇಶನ್ ಆಧರಿಸಿ ಕಾರು ಚಲಾಯಿಸುತ್ತಿದ್ದ ವೇಳೆ ಭೀಕರ ಅಪಘಾತ ನಡೆದಿದೆ.

ಉತ್ತರ ಪ್ರದೇಶ : ಗೂಗಲ್ ಮ್ಯಾಪ್ ನ್ಯಾವಿಗೇಶನ್ ಆಧರಿಸಿ ಕಾರು ಚಲಾಯಿಸುತ್ತಿದ್ದ ವೇಳೆ ಭೀಕರ ಅಪಘಾತ ನಡೆದಿದೆ. ಜಿಪಿಎಸ್ ದೋಷದಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ಕಾರು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

Ad

ಮಂಜು ಮುಸುಕಿನ ವಾತಾವರಣದಲ್ಲಿ ದಾರಿ ಕಾಣದೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರು ನೇರವಾಗಿ ರಾಮಗಂಗಾ ನದಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ ಗೂಗಲ್ ಮ್ಯಾಪ್ ಅಪ್ಡೇಟ್ ಆಗದ ಪರಿಣಾಮ ತೋರಿಸಿದ ತಪ್ಪು ಮಾಹಿತಿಯಿಂದ ಈ ದುರಂತ ಸಂಭವಿಸಿದೆ.

Ad

ಮೂವರು ಮಂದಿ ಪ್ರಯಾಣಿಕರು ತೆರಳುತ್ತಿದ್ದ ಕಾರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿತ್ತು . ಜಿಪಿಎಸ್ ನ್ಯಾವಿಗೇಷನ್ ಅನ್ನು ಅನುಸರಿಸುತ್ತಾ ಸಾಗಿದ ಕಾರ್ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿಂದ ನೇರವಾಗಿ ನದಿ ನೀರಿಗೆ ಬಿದ್ದಿದೆ.

Ad

ಹಿಂದೆ ಈ ಪ್ರದೇಶದಲ್ಲಿ ಪ್ರವಾಹದ ಸಂದರ್ಭದಲ್ಲಿ ಸೇತುವೆಯ ಮುಂಭಾಗದ ಭಾಗವು ನದಿಗೆ ಕುಸಿದಿದೆ ಎಂಬುದನ್ನು ಜಿಪಿಎಸ್ ನ್ಯಾವಿಗೇಷನ್ ನವೀಕರಿಸದ ಕಾರಣ ಈ ಅವಘಡ ಸಂಭವಿಸಿದೆ.

Ad

ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ಸುರಕ್ಷತಾ ಅಡೆತಡೆಗಳು ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಕೂಡ ಅಪಾಯಕ್ಕೆ ಕಾರಣವಾಗಿದೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Ad
Ad
Ad
Nk Channel Final 21 09 2023