ಉತ್ತರಪ್ರದೇಶ: ಸ್ಟಂಟ್ ಮಾಡುತ್ತ ವೇಗವಾಗಿ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಸಾವನಪ್ಪಿದ್ದು, ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆ ಉತ್ತರಪ್ರದೇಶ ಕಾನ್ಪುರದಲ್ಲಿ ನಡೆದಿದೆ.
ಅಪ್ರಾಪ್ತ ವಯಸ್ಸಿನ ಯುವಕರಿಬ್ಬರು ಕಾರಿನಲ್ಲಿ ಸ್ಟಂಟ್ ಮಾಡುತ್ತಾ ವೇಗವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ, ಕಾರು ನಿಯಂತ್ರಣ ತಪ್ಪಿ ಎದುರಿಗೆ ಬಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿಯಲ್ಲಿದ್ದ ತಾಯಿ ಹಾಗೂ ಮಗು 30 ಅಡಿ ದೂರಕ್ಕೆ ಹೋಗಿ ಬಿದ್ದಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಾನ್ಪುರದ ಕಿದ್ವಾಯಿ ನಗರದಲ್ಲಿ ಈ ನಡೆದಿರುವುದಾಗಿ ವರದಿಯಾಗಿದೆ. ಕಿದ್ವಾಯಿ ನಗರದಲ್ಲಿ ಅಪ್ರಾಪ್ತ ಯುವಕರಿಬ್ಬರು ಕಾರಿನಲ್ಲಿ ಸ್ಟಂಟ್ ಮಾಡುತ್ತಾ ವೇಗವಾಗಿ ಬಂದಿದ್ದಾರೆ. ಈ ವೇಳೆ ಕ್ಲಿನಿಕ್‌ನಿಂದ ಮನೆಗೆ ತೆರಳುತ್ತಿದ್ದ ಮಹಿಳೆ ಮತ್ತು ಆಕೆಯ 12 ವರ್ಷದ ಮಗಳಿರುವ ಸ್ಕೂಟರ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಸ್ಥಳೀಯರು ತಕ್ಷಣ ತಾಯಿ ಮತ್ತು ಮಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಹಿಳೆ ಅದಾಗಲೇ ಸಾವನ್ನಪ್ಪಿದ್ದು, ಬಾಲಕಿಗೆ ತೀವ್ರ ಗಾಯಗಳಾಗಿವೆ.ಕಿದ್ವಾಯಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅಪ್ರಾಪ್ತ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.