ಬೃಂದಾವನ: ಪವಿತ್ರ ಮಹಾಕುಂಭ ಮೇಳದ ಸಂಭ್ರಮದ ಮಧ್ಯೆ ಮಹಾ ದುರಂತ ಸಂಭವಿಸಿದೆ. ಯಾತ್ರಿಕರು ಹೋಗುತ್ತಿದ್ದ ಬಸ್ ಧಗಧಗಿಸಿದೆ. ಉತ್ತರ ಪ್ರದೇಶದ ಬೃಂದಾವನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸಜೀವ ದಹನವಾಗಿದ್ದಾರೆ.
ಕುಂಭಮೇಳಕ್ಕೆ ತೆರಳುತ್ತಿದ್ದ ಬಸ್ ಸುಟ್ಟು ಕರಕಲಾಗಿದೆ. ಆ ಸಮಯದಲ್ಲಿ 50 ಯಾತ್ರಿಕರು ಇದ್ದರು ಎಂದು ಹೇಳಲಾಗುತ್ತಿದೆ. ಕುಂಭಮೇಳಕ್ಕೆ ತೆರಳುವ ಮಾರ್ಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಬಸ್ ನಲ್ಲಿ 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರಂತದಲ್ಲಿ ಕುಭಿರ್ ಮಂಡಲದ ಪಾಲ್ಸಿ ಗ್ರಾಮದ ವೃದ್ಧರೊಬ್ಬರು ಸಜೀವ ದಹನವಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.