Ad

ಹಾಲಿನ ಟ್ಯಾಂಕರ್​ಗೆ ಬಸ್​ ಡಿಕ್ಕಿ, 18 ಮಂದಿ ಸಾವು, 20 ಜನರಿಗೆ ಗಾಯ

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್​ ಹಾಗೂ ಹಾಲಿನ ಟ್ಯಾಂಕರ್​ ನಡುವೆ ಡಿಕ್ಕಿ ಉಂಟಾದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದು,

ಉತ್ತರ ಪ್ರದೇಶ:   ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್​ ಹಾಗೂ ಹಾಲಿನ ಟ್ಯಾಂಕರ್​ ನಡುವೆ ಡಿಕ್ಕಿ ಉಂಟಾದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಹಾರದ ಶಿವಗಢದಿಂದ ದೆಹಲಿಗೆ ಹೋಗುತ್ತಿದ್ದ ಸ್ಲೀಪರ್ ಬಸ್ ಬೆಹ್ತಾ ಮುಜಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಏರ್‌ಸ್ಟ್ರಿಪ್‌ನಲ್ಲಿ ಈ ಭೀಕರ ಘಟನೆ ಸಂಭವಸಿದೆ.

Ad
300x250 2

ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ಯಾಂಕರ್ ಹಾರಿ ಹೋಗಿವೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಅದೇ ವೇಳೆ ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಕೂಡಲೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.ಅಪಘಾತದ ಮಾಹಿತಿ ಪಡೆದ ಡಿಎಂ ಮತ್ತು ಎಸ್ಪಿ ಕೂಡ ಸ್ಥಳಕ್ಕೆ ಆಗಮಿಸಿದರು.

Ad
Ad
Nk Channel Final 21 09 2023
Ad